ಹೈದರಬಾದ್(ಸೆ.29): ಮಾಟ ಮಂತ್ರ ಮಾಡಿ ಜನರನ್ನು ವಂಚಿಸುತ್ತಿದ್ದ ಡೋಂಗಿ ಬಾಬಾ ಹೈದ್ರಾಬಾದ್ ​​ನ ಡಿಸಿಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಮುಂದೆಯೇ ಡಿಸ್ಕೊ ಡ್ಯಾನ್ಸ್‌ ಮಾಡಿದ್ದಾನೆ.

ಮಾಟ ಮಂತ್ರಗಳ ಮೂಲಕ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಡೋಂಗಿ ಬಾಬಾನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಾಬಾನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. 

ವಿಚಾರಣೆ ವೇಳೆ ಡೋಂಗಿ ಬಾಬಾ ನಾನು ಡ್ಯಾನ್ಸರ್‌ ಎಂದು ಹೇಳಿಕೊಂಡಿದ್ದಾನೆ. ಆಗ ಪೊಲೀಸರು ಬಾಬಾಗೆ ಡ್ಯಾನ್ಸ್ ಮಾಡಲು ಹೇಳಿದ್ದಾರೆ.

ಆಗ ಡೋಂಗಿ ಬಾಬಾ ಮಿಥುನ್‌ ಚಕ್ರವರ್ತಿ ಅಭಿನಯದ ಐ ಆ್ಯಮ್‌ ಎ ಡಿಸ್ಕೋ ಡ್ಯಾನ್ಸರ್‌' ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಪೊಲೀಸರು ಆತನ ಡ್ಯಾನ್ಸ್​​​ನ್ನ ಎಂಜಾಯ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗಿದೆ.