ಅರ್ಜಿದಾರರು ಕೇಳಿರುವ ಮಾಹಿತಿ ಬಹಿರಂಗ ಪಡಿಸುವುದರಿಂದ ದೇಶದ ಸಾರ್ವಭೌಮತೆ ಹಾಗೂ ಹಿತಾಸಕ್ತಿಗೆ ಧಕ್ಕೆಯುಂಟಾಗುವ ಕಾರಣ ಮಾಹಿತಿ ನೀಡಲು ಸಾಧ್ಯವಿಲ್ಲವೆಂದು ರಿಸರ್ವ್ ಬ್ಯಾಂಕ್ ಹೇಳಿದೆ.

ನವದೆಹಲಿ (ಡಿ.29): ಹಠಾತ್ತಾಗಿ ನೋಟು ಅಮಾನ್ಯ ಕ್ರಮ ಕೈಗೊಳ್ಳಲು ಕಾರಣವೇನು ಎಂದು ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರಿಸಲು ನಿರಾಕರಿಸಿದೆ.

ದೊಡ್ಡ ಮುಖಬೆಲೆ ನೋಟುಗಳನ್ನು ಏಕಾಏಕಿ ನಿಷೇಧಿಸಲು ಕಾರಣಗಳೇನು ಎಂದು ಕೇಳಿ ವೆಂಕಟೇಶ್ ನಾಯಕ್ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ರಿಸರ್ವ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು ಕೇಳಿರುವ ಮಾಹಿತಿ ಬಹಿರಂಗ ಪಡಿಸುವುದರಿಂದ ದೇಶದ ಸಾರ್ವಭೌಮತೆ ಹಾಗೂ ಹಿತಾಸಕ್ತಿಗೆ ಧಕ್ಕೆಯುಂಟಾಗುವ ಕಾರಣ ಮಾಹಿತಿ ನೀಡಲು ಸಾಧ್ಯವಿಲ್ಲವೆಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಆದರೆ ಅರ್ಜಿದಾರರು ಕೇಳಿರುವ ಮಾಹಿತಿಯು 'ವಿನಾಯಿತಿ' ನೀಡಲ್ಪಟ್ಟ ವರ್ಗದಡಿಯಲ್ಲಿ ಬರುವುದಿಲ್ಲವೆಂದು ಕೇಂದ್ರೀಯ ಮಾಹಿತಿ ಆಯುಕ್ತ ಶೈಲೇಶ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಈ ಮುಂಚೆಯು ಕೂಡಾ ರಿಸರ್ವ್ ಬ್ಯಾಂಕ್, ನೋಟು ಅಮಾನ್ಯ ಕ್ರಮ ನಿರ್ಧರಿಸಲ್ಪಟ್ಟ ಸಭೆಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿತ್ತು.

ಅರ್ಜಿದಾರ ವೆಂಟೇಶ್ ನಾಯಕ್, ತಾನು ಈ ಕುರಿತು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.