ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇತ್ತೀಚೆಗೆ ರಾಜ್ಯ ವ್ಯಾಪ್ತಿ ಪ್ರಚಾರದಲ್ಲಿ ತೊಡಗಿದ್ದಾಗ ದಲಿತರ ಮನೆಯಲ್ಲಿ ಭೋಜನ ಮಾಡುತ್ತಿದ್ದರು, ಇದು ಭಾರೀ ವಿವಾದ ಹುಟ್ಟು ಹಾಕಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇತ್ತೀಚೆಗೆ ರಾಜ್ಯ ವ್ಯಾಪ್ತಿ ಪ್ರಚಾರದಲ್ಲಿ ತೊಡಗಿದ್ದಾಗ ದಲಿತರ ಮನೆಯಲ್ಲಿ ಭೋಜನ ಮಾಡುತ್ತಿದ್ದರು, ಇದು ಭಾರೀ ವಿವಾದ ಹುಟ್ಟು ಹಾಕಿತ್ತು.
ಬೆಂಗಳೂರು(ಜು.13): ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇತ್ತೀಚೆಗೆ ರಾಜ್ಯ ವ್ಯಾಪ್ತಿ ಪ್ರಚಾರದಲ್ಲಿ ತೊಡಗಿದ್ದಾಗ ದಲಿತರ ಮನೆಯಲ್ಲಿ ಭೋಜನ ಮಾಡುತ್ತಿದ್ದರು, ಇದು ಭಾರೀ ವಿವಾದ ಹುಟ್ಟು ಹಾಕಿತ್ತು.
ಈ ಸಂಬಂಧ ಸಿಎಂ ಸಿದ್ರಾಮಯ್ಯ ಕೂಡ ದನಿ ಏರಿಸಿದ್ದರು. ದಲಿತರ ಮನೆಯ ಮಗಳನ್ನ ತಂದು ಮದುವೆ ಮಾಡಿಕೊಳ್ಳಿ. ದಲಿತರ ಮನೆಗಳಿಗೆ ಹೆಣ್ಣುಮಕ್ಕಳನ್ನ ಕೊಟ್ಟರೆ ನಿಜವಾಗಿ ದಲಿತರು ಉದ್ಧಾರ ಆಗುತ್ತಾರೆ ಅಂತ ಹೇಳಿಕೆ ಕೊಟ್ಟಿದ್ದರು.
ಇದಕ್ಕೆ ಉತ್ತರಿಸುವ ಭರದಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಕಾರ್ಯಾಧ್ಯಕ್ಷರು ದಲಿತರನ್ನು ಯಾಕೆ ಮದುವೆಯಾಗಿಲ್ಲ ಅಂತಾ ಹೊಸ ವಿವಾದವನ್ನ ಸೃಷ್ಟಿಸಿದ್ದರು. ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಖಾರವಾಗಿ ರಿಯಾಕ್ಟ್ ಮಾಡಿ, 'ನನ್ನ ಮದುವೆಯಾಗಿ 22 ವರ್ಷಗಳು ಕಳೆದಿವೆ ಈಗ ಯಾಕೆ ಅವರು ನನ್ನ ಮದುವೆ ಬಗ್ಗೆ ಮಾತನಾಡುತ್ತಾರೆ? ಶೋಭಾ ಕರಂದ್ಲಾಜೆಗಿನ್ನೂ ಮದುವೆಯಾಗಿಲ್ಲ. ಬೇಕಾದರೆ ಅವರೇ ನೋಡಿಕೊಂಡು ಮದುವೆ ಆಗಲಿ. ನಾಣು ಯಾರನ್ನು ಮದುವೆಯಾಗಿದ್ದೇನೆಂದು ಇಡೀ ರಾಜ್ಯಕ್ಕೆ ಗೊತ್ತು. ನಾನೊಬ್ಬ ಹಿಂದೂ ನಾನು ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದೇನೆ. ಅದರಲ್ಲಿ ತಪ್ಪೇನಿದೆ? ಅದರ ಬಗ್ಗೆ ಅವರು ಯಾಕೆ ಮಾತನಾಡಬೇಕು? ಅದರ ಹಿಂದಿನ ಉದ್ದೇಶ ಏನು? ಆಗ ದಲಿತ ಹುಡುಗಿಯನ್ನು ಇಷ್ಟ ಪಟ್ಟಿದ್ದರೆ ಮದುವೆಯಾಗುತ್ತಿದ್ದೆ ನನಗೇನು ಜಾತಿ ಎಂಬ ಬೇದ ಭಾವ ಇಲ್ಲ, ಅದರಲ್ಲಿ ತಪ್ಪು ಕೂಡಾ ಇಲ್ಲ. ಅವರಿಗಿನ್ನೂ ಅವಕಾಶ ಇದೆ.' ಅಂತ ತಿರುಗೇಟು ಕೊಟ್ಟಿದ್ದಾರೆ.
