ಪೊಲೀಸರು ಈಗಾಗಾಲೇ ದಿನಕರನ್​ನನ್ನು​ ತಿಹಾರ್​ ಜೈಲಿಗೆ ಕರೆದೊಯ್ಯಿದ್ದಾರೆ. ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್​ ಪಕ್ಷದ ಎರಡೆಲೆ ಚಿಹ್ನೆಗಾಗಿ 50 ಕೋಟಿ ಹಣ ನೀಡಿರುವ ಆರೋಪ ಕೇಳಿಬಂದಿದ್ದು ದೆಹಲಿ ಪೊಲೀಸರು ಎಫ್'ಐಆರ್ ದಾಖಲಿಸಿದ್ದರು.

ನವದೆಹಲಿ (ಮೇ.01): ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಗಾಗಿ 50 ಕೋಟಿ ಲಂಚ ಪ್ರಕರಣ ಸಂಬಂಧ ಟಿಟಿವಿ ದಿನಕರನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವತ್ತಿಗೆ ಪೊಲೀಸ್ ಕಸ್ಟಡಿ ಮುಗಿದ ಕಾರಣ, ದೆಹಲಿಯ ತೀಸ್​ ಹಜಾರಿ ಕೋರ್ಟಿಗೆ ದಿನಕರನ್’ರನ್ನು ಹಾಜರುಪಡಿಸಲಾಯ್ತು. ಈ ವೇಳೆ ನ್ಯಾಯಾಧೀಶರು, ವಾದ-ಪ್ರತಿವಾದ ಆಲಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ, ಹೀಗಾಗಿ ಮೇ 15ರವರೆಗೆ ಬಂಧನಕ್ಕೊಪ್ಪಿಸಲಾಗಿದೆ.

ಪೊಲೀಸರು ಈಗಾಗಾಲೇ ದಿನಕರನ್​ನನ್ನು​ ತಿಹಾರ್​ ಜೈಲಿಗೆ ಕರೆದೊಯ್ಯಿದ್ದಾರೆ. ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್​ ಪಕ್ಷದ ಎರಡೆಲೆ ಚಿಹ್ನೆಗಾಗಿ 50 ಕೋಟಿ ಹಣ ನೀಡಿರುವ ಆರೋಪ ಕೇಳಿಬಂದಿದ್ದು ದೆಹಲಿ ಪೊಲೀಸರು ಎಫ್'ಐಆರ್ ದಾಖಲಿಸಿದ್ದರು.

ಈ ಕೇಸಿನಲ್ಲಿ ಮಲ್ಲಿಕಾರ್ಜುನ್ ಮತ್ತು ಬೆಂಗಳೂರು ಮೂಲಕ ದಲ್ಲಾಳಿ ಸುಖೇಶ್ ಕೂಡ ಸದ್ಯ ಜೈಲಿನಲ್ಲಿದ್ದಾರೆ.