ಮೇಷ ರಾಶಿಯವರೇ ಯೋಚಿಸಿ ಕಾರ್ಯ ಕೈಗೊಳ್ಳಿ : ಉಳಿದ ರಾಶಿ ಹೇಗಿದೆ..?

First Published 8, Mar 2018, 7:03 AM IST
Dina Bhavishya  08 March 2018
Highlights

ಮೇಷ ರಾಶಿಯವರೇ ಯೋಚಿಸಿ ಕಾರ್ಯ ಕೈಗೊಳ್ಳಿ : ಉಳಿದ ರಾಶಿ ಹೇಗಿದೆ..?

ಮೇಷ : ರಾಶಿಯ ಅಧಿಪತಿ ಶನಿಯೊಂದಿಗೆ ಸೇರಿದ್ದಾನೆ ಕೋಪ-ತಾಪಗಳ ಸಂಭವ, ಯೋಚಿಸಿ ಕಾರ್ಯಗಳನ್ನು ಮಾಡಿ, ಸುಬ್ರಹ್ಮಣ್ಯ ಹಾಗೂ ಶನೈಶ್ಚರ ಆರಾಧನೆ ಮಾಡಿ

ವೃಷಭ : ಅಷ್ಟಮದಲ್ಲಿ ಶನಿ ಕುಜರ ಸಂಯೋಗ, ಆರೋಗ್ಯದಲ್ಲಿ ಏರುಪೇರು, ಅರ್ಧನಾರೀಶ್ವರ ದರ್ಶನ ಮಾಡಿ

ಮಿಥುನ  : ಬಾಧೆಯ ಸ್ಥಾನದಲ್ಲಿ ಶನಿ-ಕುಜರ ಸಂಯೋಗವಾಗಿದೆ, ದಾಂಪತ್ಯದಲ್ಲಿ ಕಲಹ, ಭಿನ್ನಾಭಿಪ್ರಾಯ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ

ಕಟಕ  : ರೋಗಸ್ಥಾನದಲ್ಲಿ ಶನಿ ಕುಜರ ಯುತಿ ಇರುವುದರಿಂದ ಕಾಲಿನ ನೋವು, ಮೂಳೆಗಳ ಬಾಧೆ ಕಾಡಲಿದೆ, ಶತ್ರುಗಳ ಕಾಟ.

ಸಿಂಹ  : ಪಂಚಮದ ಶನಿ-ಕುಜರ ಯುತಿಯಿಂದ ಮಕ್ಕಳಲ್ಲಿ ಕಾದಾಟ, ಮಕ್ಕಳಿಂದ ಬೇಸರ, ಸಾಮಾನ್ಯ ದಿನ

ಕನ್ಯಾ  : ರಾಶಿಯ ಅಧಿಪತಿ ಬಾಧೆಯಲ್ಲಿದ್ದಾನೆ ಜೊತೆಗೆ ರಾಶಿಗೆ ಶುಕ್ರ ದೃಷ್ಟಿ ಇರುವುದರಿಂದ ಸ್ವಲ್ಪ ಸಿಹಿ, ಸ್ವಲ್ಪ ಖುಷಿಯ ದಿನ, ಧನಸ್ಥಾನದಲ್ಲಿ ಗುರುವು ಇರುವುದರಿಂದ ಧನ ಪ್ರಾಪ್ತಿ.

ತುಲಾ  : ರಾಶ್ಯಾಧಿಪತಿ ಉಚ್ಛನಾಗಿರುವುದರಿಂದ ಉತ್ತಮದಿನವಾಗಿರಲಿದೆ, ಆದರೆ ತೃತೀಯದ ಶನಿ-ಕುಜರಿಂದ ಸಹೋದರ ಬಾಂಧವ್ಯದಲ್ಲಿ ಕೋಲಾಹಲ

ವೃಶ್ಚಿಕ : ಧನ ವ್ಯಯ, ಶತ್ರುಗಳ ಕಾಟ, ಸಾಮಾನ್ಯದಿನ, ಹೆಣ್ಣು ಮಕ್ಕಳಿಂದ ಸಿಹಿ ಸುದ್ದಿ, ಸುಬ್ರಹ್ಮಣ್ಯ ಆರಾಧನೆ ಮಾಡಿ

ಧನಸ್ಸು : ಆರೋಗ್ಯ ಸಮಸ್ಯೆ ಕಾಡಲಿದೆ, ಅಹಂಕಾರದಿಂದ ಕಾದಾಟ, ಗುರುವಿನ ಮಂತ್ರ ಜಪಿಸಿ

ಮಕರ  : ಸಾಮಾನ್ಯದಿನ, ಮನೆಯಲ್ಲಿ ಗಂಭೀರ ವಾತಾವರಣ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಆಂಜನೇಯ ಸ್ಮರಣೆ ಮಾಡಿ

ಕುಂಭ : ಸಮಾಧಾನದ ದಿನ, ದೊಡ್ಡವರಿಂದ ಉತ್ತಮ ಮಾರ್ಗದರ್ಶನ, ಶಿವಾನಂದಲಹರಿ ಸ್ತೋತ್ರ ಪಠಿಸಿ

ಮೀನ : ಆರೋಗ್ಯದಲ್ಲಿ ಏರುಪೇರು, ಸಣ್ಣಪುಟ್ಟ ಅವಘಡ, ಮಕ್ಕಳಲ್ಲಿ ಬೇಸರದ ವಾತಾವರಣ, ಗುರುಸ್ತೋತ್ರ ಪಠಿಸಿ

loader