ರಾಜಸ್ಥಾನದ ಬಿಜೆಪಿ ಮುಖಂಡರಾಗಿದ್ದ ಮನ್ವೇಂದ್ರ ಸಿಂಗ್ ಮತ್ತು ಹರೀಶ್ ಮೀನಾ ಅವರ ರಾಜೀನಾಮೆಯಿಂದ ಅಘಾತಕ್ಕೊಳಗಾಗಿದ್ದ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ.

ಭುವನೇಶ್ವರ್, (ನ.30): ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಗೆ ಆಘಾತವಾಗಿದೆ. ರಾಜಸ್ಥಾನದ ಬಿಜೆಪಿ ಮುಖಂಡ ರಾಜೀನಾಮೆ ಪರ್ವ ಮುಗಿದಿದ್ದು, ಇದೀಗ ಒಡಿಶಾ ಬಿಜೆಪಿಯ ಇಬ್ಬರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಒಡಿಶಾ ಬಿಜೆಪಿ ಮುಖಂಡ ದಿಲೀಪ್ ರೇ ಹಾಗೂ ಇನ್ನೋರ್ವ ನಾಯಕ ಬಿಜೋಯ್ ಮಹಾಪಾತ್ರಾ ಅವರೂ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಇಬ್ಬರು ನಾಯಕರೂ ತಮ್ಮ ಜಂಟಿ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ ಅದನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಕಳಿಸಿದ್ದಾರೆ.

Scroll to load tweet…

ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಮತ್ತು ಅವರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ನಾನು ವಿಫಲನಾಗಿದ್ದೇನೆ. ಆದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ದಿಲೀಪ್ ರೇ ರಾಜೀನಾಮೆಯ ಪತ್ರದಲ್ಲಿ ತಿಳಿಸಿದ್ದಾರೆ.