ದಿಗ್ವಿಜಯ್ ಸಿಂಗ್ ಅವರನ್ನು ಗೋವಾ ರಾಜ್ಯದ ಉಸ್ತುವಾರಿ ಸ್ಥಾನದಿಂದಲೂ ತೆಗೆದು ಹಾಕಲಾಗಿದೆ. ರಾಜ್ಯ ವಿಧಾನಸಭಾ ಇನ್ನು ಒಂದು ವರ್ಷವಿರುವುದರಿಂದ ಎಐಸಿಸಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.  

ಬೆಂಗಳೂರು(ಏ.29): ಎಐಸಿಸಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸ್ಥಾನದಿಂದ ದಿಗ್ವಿಜಯ್ ಸಿಂಗ್'ಗೆ ಕೋಕ್ ನೀಡಲಾಗಿದ್ದು,ನೂತನ ಉಸ್ತುವಾರಿಯನ್ನಾಗಿ ಕೇರಳ ಕಾಂಗ್ರೆಸ್ ಸಂಸದ ಕೆ.ಸಿ. ವೇಣು'ಗೋಪಾಲ್ ಅವರನ್ನು ನೇಮಿಸಲಾಗಿದೆ.

ದಿಗ್ವಿಜಯ್ ಸಿಂಗ್ ಅವರನ್ನು ಗೋವಾ ರಾಜ್ಯದ ಉಸ್ತುವಾರಿ ಸ್ಥಾನದಿಂದಲೂ ತೆಗೆದು ಹಾಕಲಾಗಿದೆ. ರಾಜ್ಯ ವಿಧಾನಸಭಾ ಇನ್ನು ಒಂದು ವರ್ಷವಿರುವುದರಿಂದ ಎಐಸಿಸಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಗೋವಾ ಹಾಗೂ ಮಣಿಪುರ ರಾಜ್ಯಕ್ಕೆ ದಿಗ್ವಿಜಯ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಅದಲ್ಲದೆ ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚು ಸ್ಥಾನ ಪಡೆದಿತ್ತು. ಆದರೆ ಉಸ್ತುವಾರಿ ವಹಿಸಿಕೊಂಡಿದ್ದ ದಿಗ್ವಿಜಯ್ ಸರ್ಕಾರ ರಚಿಸಲು ಮಹತ್ವದ ಪಾತ್ರ ವಹಿಸಲಿಲ್ಲ. ಕೊನೆಗೆ ಬಿಜೆಪಿ ಸರ್ಕಾರ ರಚಿಸಿ ಮನೋಹರ್ ಪರ್ರಿಕರ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಕರ್ನಾಟಕದಲ್ಲೂ ದಿಗ್ವಿಜಯ್ ವಿರುದ್ಧ ಹಲವು ಕಾಂಗ್ರೆಸ್ ನಾಯಕರು ಅಪಸ್ವರವೆತ್ತಿದ್ದರು.

ಕೇರಳದ ಅಲಪುಳಾ ಕ್ಷೇತ್ರದ ಸಂಸದರಾಗಿರುವ ಕೆ.ಸಿ. ವೇಣುಗೋಪಾಲ್ ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದರು.