ಇಡೀ ಗ್ರಾಮವನ್ನು ನಗದು ರಹಿತ ವಹಿವಾಟಿಗೆ ಸಿದ್ದವಾಗುತ್ತಿದೆ. ಗ್ರಾಮದ ಕಿರಾಣಿ ಅಂಗಡಿ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಳಿಗೆ, ಝರಾಕ್ಸ್ ಮಳಿಗೆಯಲ್ಲಿ ನಗದು ರಹಿತ ವಹಿವಾಟು ಆರಂಭವಾಗಿದೆ.
ಆ ಗ್ರಾಮದಲ್ಲಿ ಎಲ್ಲವೂ ನಗದು ರಹಿತ ವಹಿವಾಟು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯನ್ನ ಸಾಕಾರಗೊಳಿಸಲು ಪಣ ತೊಟ್ಟಿದ್ದಾರೆ ಆ ಗ್ರಾಮಸ್ಥರು.ಅದುವೇ ಧಾರವಾಡ ಜಿಲ್ಲೆಯ ಕಮಡೋಳ್ಳಿ ಗ್ರಾಮ. ವಿಜಯಾ ಬ್ಯಾಂಕಿನ ಸಹಕಾರದಿಂದ ಇಡೀ ಗ್ರಾಮವನ್ನು ನಗದು ರಹಿತ ವಹಿವಾಟಿಗೆ ಸಿದ್ದವಾಗುತ್ತಿದೆ. ಗ್ರಾಮದ ಕಿರಾಣಿ ಅಂಗಡಿ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಳಿಗೆ, ಝರಾಕ್ಸ್ ಮಳಿಗೆಯಲ್ಲಿ ನಗದು ರಹಿತ ವಹಿವಾಟು ಆರಂಭವಾಗಿದೆ.
ಇನ್ನು ಗ್ರಾಮದ ಅನಕ್ಷರಸ್ಥ, ಹಾಗೂ ಡೆಬಿಟ್ ಕಾಡ್೯ ಬಳಕೆ ಮಾಡಲು ಬಾರದ ಖಾತೆದಾರರ ಅನುಕೂಲಕ್ಕಾಗಿ ಬ್ಯಾಂಕ್ ಪ್ರತಿನಿಧಿ ನೇಮಿಸಲಾಗಿದೆ. ನಿಮ್ಮ ಆಧಾರ ಸಂಖ್ಯೆ ನೀಡಿ, ಹೆಬ್ಬೆಟ್ಟು ಹೊತ್ತಿದರೆ ಸಾಕು ಹಣ ಪಡೆಯಬಹುದು, ಡೆಪಸಿಟ್ ಮಾಡುವ ಎಲ್ಲ ಸೌಲಭ್ಯ ಆ ಗ್ರಾಮದಲ್ಲಿದೆ.
