ನವದೆಹಲಿ (ಡಿ.25): ಇ-ಪಾವತಿಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ರೂಪಿಸಿರುವ ‘ಲಕ್ಕಿ ಗ್ರಾಹಕ ಯೋಜನೆ’ ಮತ್ತು ‘ಡಿಜಿ–ಧನ ವ್ಯಾಪಾರ ಯೋಜನೆ’ಗಳಿಗೆ ಇಂದು ಚಾಲನೆ ಸಿಗಲಿದೆ.

ಲಕ್ಕಿ ಗ್ರಾಹಕ ಯೋಜನೆ ಅಡಿಯಲ್ಲಿ ಆಯ್ಕೆಯಾದವರಿಗೆ ₹ 1,000ದಿಂದ ₹ 15 ಸಾವಿರದವರೆಗೆ ಬಹುಮಾನ ಸಿಗಲಿದೆ.

ಈ ಯೋಜನೆ ಅಡಿ ಪ್ರತಿದಿನ ಅದೃಷ್ಟಶಾಲಿ ಗ್ರಾಹಕರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಲ್ಲದೆ ವಾರದಲ್ಲಿ ಒಮ್ಮೆ ವಿಶೇಷ ಲಾಟರಿ ಮೂಲಕವೂ ಅದೃಷ್ಟಶಾಲಿ ಗ್ರಾಹಕರನ್ನು ಆಯ್ಕೆ ಮಾಡಲಾಗುತ್ತದೆ.

ಡಿಜಿ ಧನ ವ್ಯಾಪಾರ ಯೋಜನೆಯಡಿ ವಾರಕ್ಕೆ ಒಮ್ಮೆ ವ್ಯಾಪಾರಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಯೋಜನೆ ಮುಂದಿನ 100 ದಿನ ಜಾರಿಯಲ್ಲಿರಲಿದೆ.  2017ರ ಏ.14ರಂದು ಬಂಪರ್‌ ವಿಜೇತರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.