ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಸ್ವಾಗತಿಸಿರುವ ಕಾರಾಗೃಹ ಡಿಐಜಿ ಡಿ.ರೂಪಾ ಅವರು, ತಮಗೆ ನೋಟಿಸ್ ನೀಡಿರುವ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೂಪಾ, ನಾನು ಮಾತ್ರವಲ್ಲ. ಈ ಹಿಂದೆ ನಿಯಮ ಮೀರಿ ಮಾಧ್ಯಮಗಳಿಗೆ ಯಾರ್ಯಾರು ಹೇಳಿಕೆ ನೀಡಿದ್ದಾರೋ ಅವರ ವಿರುದ್ಧವೂ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.‘

ಬೆಂಗಳೂರು(ಜು.15): ಪರಪ್ಪನ ಅಗ್ರಹಾರ ಜೈಲು ಅಕ್ರಮ ಕುರಿತು ಡಿಐಜಿ ಡಿ.ರೂಪಾ ಸಿದ್ಧಪಡಿಸಿರುವ ೨ನೇ ವರದಿ ಶನಿವಾರ ಸ್ಫೋಟಗೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ ತಮಿಳುನಾಡಿನ ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ಸಭೆ ನಡೆಸಲು ವಿಶೇಷ ಸೆಲ್ ಸೌಲಭ್ಯ ನೀಡಿರುವ

ಕುರಿತು ಇನ್ನಷ್ಟು ಸ್ಫೋಟಕ ಮಾಹಿತಿ ಇರಲಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ, ತಮಗೆ ನೋಟಿಸ್ ನೀಡಿದ ಸರ್ಕಾರದ ಕ್ರಮವನ್ನು ರೂಪಾ ಬಹಿರಂಗವಾಗಿ ಪ್ರಶ್ನಿಸಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಸ್ವಾಗತಿಸಿರುವ ಕಾರಾಗೃಹ ಡಿಐಜಿ ಡಿ.ರೂಪಾ ಅವರು, ತಮಗೆ ನೋಟಿಸ್ ನೀಡಿರುವ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಶುಕ್ರವಾರ

ಸುದ್ದಿಗಾರರೊಂದಿಗೆ ಮಾತನಾಡಿದ ರೂಪಾ, ನಾನು ಮಾತ್ರವಲ್ಲ. ಈ ಹಿಂದೆ ನಿಯಮ ಮೀರಿ ಮಾಧ್ಯಮಗಳಿಗೆ ಯಾರ್ಯಾರು ಹೇಳಿಕೆ ನೀಡಿದ್ದಾರೋ ಅವರ ವಿರುದ್ಧವೂ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.‘ಕೆಲ ವರ್ಷಗಳ ಹಿಂದೆ ವಿಧಾನಸಭೆಯ ಅಧಿವೇಶದಲ್ಲಿ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಬಗ್ಗೆ ಮಾತನಾಡುವಾಗ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ಹೆಸರನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದರು. ಆ ವರದಿಯಲ್ಲಿ

ಹಲವು ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದೆ ಎಂದಿದ್ದರು. ವಿಧಾನಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ನೀಡಿದ್ದ ಹೇಳಿಕೆ ಪ್ರಶ್ನಾತೀತ. ಆದರೂ ಅಂದು ಆ ಹೇಳಿಕೆಯನ್ನು ನೇರವಾಗಿ

ಖಂಡಿಸಿ ಮಾಧ್ಯಮಗಳಿಗೆ ಸೋನಿಯಾ ನಾರಂಗ್ ಹೇಳಿಕೆ ನೀಡಿದ್ದರು. ಅಲ್ಲದೆ ಮುಖ್ಯಮಂತ್ರಿಗಳ ಹೇಳಿಕೆಗೆ ಆಕ್ಷೇಪಿಸುವಾಗ ಸೋನಿಯಾ ಅವರು ‘ಎಚ್ಚರಿಕೆ’ ಎಂಬ ಪದ ಪ್ರಯೋಗ ಮಾಡಿದ್ದರೂ ಆಗ ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ’ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಅತೃಪ್ತಿ ವ್ಯಕ್ತಪಡಿಸಿದರು. ಮೊದಲು ಮಾತನಾಡಿದ್ದು ನಾನಲ್ಲ- ರೂಪಾ: ನಾನು ಕಾರಾಗೃಹದ ಅಕ್ರಮಗಳ ಕುರಿತು ಡಿಜಿಪಿ ಅವರಿಗೆ ಸಲ್ಲಿಸಿದ್ದ ವರದಿಯು ಮಾಧ್ಯಮಗಳಿಗೆ ಬಹಿರಂಗ ಹೇಗಾಯ್ತು ಎಂಬುದು ಗೊತ್ತಿಲ್ಲ.

ನಾನು ಆ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆ ಎಂಬ ಆರೋಪ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು. ಇನ್ನು ವರದಿ ಕುರಿತು ಮೊದಲು ಡಿಜಿಪಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದಾದ ಬಳಿಕ ಡಿಜಿಪಿ ಹೇಳಿಕೆ ಕುರಿತು ಮಾಧ್ಯಮಗಳು ನನ್ನನ್ನು ಕೇಳಿದ ಪ್ರಶ್ನೆಗಳಿಗೆ ನಾನು ಪ್ರತಿಕ್ರಿಯಿಸಿದ್ದೇನೆ. ಆದರೆ ನಾನಾಗಿಯೇ ಹೋಗಿ ಮಾಧ್ಯಮಗಳಿಗೆ ಮಾತನಾಡಿಲ್ಲ ಎಂದು ಹೇಳಿದರು. ನಾನು ಫೇಸ್‌ಬುಕ್‌ಗೆ ಪೋಟೋ ಹಾಕಿದ್ದನ್ನು ಕಾನೂನು ಉಲ್ಲಂಘನೆ ಅನ್ನುತ್ತಾರೆ. ಆದರೆ ಗುರುವಾರ ಕಾರಾಗೃಹದಲ್ಲಿ ನಡೆದಿರುವ ಕೈದಿಗಳ ಪ್ರತಿಭಟನೆ ವಿಡಿಯೋ ಹೇಗೆ ಮಾಧ್ಯಮಗಳಲ್ಲಿ ಬಿತ್ತರವಾಯಿತು? ಇದು ಕಾರಾಗೃಹ ಕಾಯ್ದೆ ಮೀರಿದಂತೆ ಆಗಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

(ಕನ್ನಡಪ್ರಭ ವಾರ್ತೆ)