ಕೋಲ್ಕತಾ[ನ.24]: ಅಂಡಮಾನ್‌- ನಿಕೋಬಾರ್‌ನಲ್ಲಿನ ಸೆಂಟಿನೆಲ್‌ ದ್ವೀಪದಲ್ಲಿರುವ ಆದಿವಾಸಿಗಳ ಮತಾಂತರಕ್ಕೆ ಯತ್ನಿಸಿ ಬಾಣದ ದಾಳಿಗೆ ಬಲಿಯಾದ ಅಮೆರಿಕನ್‌ ಮತಪ್ರಚಾರಕನ ಶವ ಸಿಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕಾಲಿಟ್ಟರೆ ಕೊಲ್ಲುವ ಆದಿವಾಸಿಗಳು ಎಲ್ಲೆಲ್ಲಿದ್ದಾರೆ?

ಹೊರ ಜಗತ್ತಿನ ಸಂಪರ್ಕಕ್ಕೆ ಬಾರದೇ ಪುಟ್ಟದ್ವೀಪದಲ್ಲಿ ಜೀವನ ಸಾಗಿಸುತ್ತಿರುವ ಆದಿವಾಸಿಗಳಿರುವ ಸ್ಥಳಕ್ಕೆ ಹೋಗಿ ಮತ ಪ್ರಚಾರಕ ಜಾನ್‌ ಅಲೆನ್‌ ಚಾವು ದೇಹ ತರಬೇಕು. ಆದರೆ ಅದೊಂದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹಾಗೂ ಆ ದ್ವೀಪದ ಸುತ್ತಳತೆಯ 5 ಕಿ.ಮೀ. ಒಳಕ್ಕೆ ಯಾರೂ ಹೋಗಬಾರದು ಎಂಬ ನಿರ್ಬಂಧ ಇರುವುದರಿಂದ ಕಾರ್ಯಾಚರಣೆ ಅಷ್ಟುಸುಲಭವಿಲ್ಲ. ಹೋದರೂ ಆದಿವಾಸಿಗಳು ದಾಳಿ ಮಾಡುತ್ತಾರೆ. ವಿಳಂಬ ಮಾಡಿದರೆ, ತಮ್ಮದೇ ರೀತಿಯಲ್ಲಿ ಶವವನ್ನು ಅಂತ್ಯಸಂಸ್ಕಾರ ಮಾಡುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಚ್ಚಿ ಬೀಳಿಸಿದ ಅಂಡಮಾನಲ್ಲಿ ಆದಿವಾಸಿಗಳಿಗೆ ಬಲಿಯಾದ ಅಮೆರಿಕನ್ ಕಥೆ

ಈ ನಡುವೆ, ಮಾನವಶಾಸ್ತ್ರ ತಜ್ಞರು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡವನ್ನು ಸೆಂಟಿನೆಲ್‌ ದ್ವೀಪದ ಸಮೀಪಕ್ಕೆ ಎರಡು ದಿನ ಕರಾವಳಿ ಕಾವಲು ಪಡೆ ಹಡಗಿನಲ್ಲಿ ಕಳುಹಿಸಲಾಗಿತ್ತು. ಯಾವುದೇ ಪ್ರಯೋಜನವಾಗಿಲ್ಲ.