ಮೋದಿ ಜೊತೆ ಅಸಮಾಧಾನಗೊಂಡಿದ್ದಾರಾ ನಿತೀಶ್ ಕುಮಾರ್?

Difference of Opinion between Modi and
Highlights

ಶಿವಸೇನೆ ಮತ್ತು ತೆಲಗುದೇಶಂ ನಂತರ ಈಗ ನಿತೀಶ್ ಕುಮಾರ್ ಕೂಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. 

ಬೆಂಗಳೂರು (ಫೆ. 27): ಶಿವಸೇನೆ ಮತ್ತು ತೆಲಗುದೇಶಂ ನಂತರ ಈಗ ನಿತೀಶ್ ಕುಮಾರ್ ಕೂಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. 

ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ನಿತೀಶ್ ಮತ್ತು ಅಮಿತ್ ಶಾ ನಡುವೆ ನಡೆದ ಮಾತುಕತೆ ಕಗ್ಗಂಟಾಗಿದೆ. 2014 ರಲ್ಲಿ ಕೇವಲ ಎರಡು ಸೀಟು ಗೆದ್ದಿರುವುದರಿಂದ ಹೆಚ್ಚು ಎಂದರೆ ನಿಮಗೆ 9 ಸ್ಥಾನ ಕೊಡುತ್ತೇವೆ ಎಂದು ಅಮಿತ್ ಶಾ ನಿತೀಶ್ ಬಳಿ ಹೇಳಿದ್ದು, ಕನಿಷ್ಠ 20 ಸೀಟ್ ಕೊಡಿ ಎಂದು ನಿತೀಶ್ ಕೇಳಿದ್ದಾರಂತೆ. ಹಿಂದೆ ಮೈತ್ರಿ ಇದ್ದಾಗ ನಿತೀಶ್ 25 ಸ್ಥಾನದಲ್ಲಿ ನಿಂತುಕೊಳ್ಳುತ್ತಿದ್ದರೆ ಬಿಜೆಪಿ 15  ರಲ್ಲಿ ನಿಲ್ಲುತ್ತಿತ್ತು. ಆದರೆ ಈಗ ಮೋದಿ ಬಂದ ಮೇಲೆ ಆಟದ ನಿಯಮಗಳು ಬದಲಾಗಿವೆ.    

-ಪ್ರಶಾಂತ್ ನಾತು

ಹೆಚ್ಚಿನ ರಾಜಕೀಯ ಸುದ್ದಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

loader