ಬೆಂಗಳೂರು (ಫೆ. 20): 3 ತಿಂಗಳ ಹಿಂದೆ ಉಡುಪಿಯಿಂದ ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದ ಶೋಭಾ ಕರಂದ್ಲಾಜೆ ಈಗ ನಾನು ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಆದರೆ ಸ್ಥಳೀಯ ಶಾಸಕರಾದ ಸಿ ಟಿ ರವಿ, ಸುನೀಲ್ ಕುಮಾರ್, ರಘುಪತಿ ಭಟ್ ಅವರ ಆಯ್ಕೆ ಜಯಪ್ರಕಾಶ್ ಹೆಗ್ಡೆ.

ಲೋಕಸಭಾ ಚುನಾವಣೆ : ಪ್ರಕಾಶ್ ರೈಗೆ ಕಾಂಗ್ರೆಸ್ ಬೆಂಬಲ..?

ಹೆಗ್ಡೆ ಅವರಿಗೇ ಟಿಕೆಟ್ ಕೊಡಿ ಎಂದು ಶಾಸಕರು ಹೇಳುತ್ತಿದ್ದಾರೆ. ಆದರೆ ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಮಾತ್ರ ಶೋಭಾಗೆ ಟಿಕೆಟ್ ಕೊಡಲೇಬೇಕು ಎನ್ನುತ್ತಿದ್ದಾರೆ. ಅದೇನೇ ಇರಲಿ ಶೋಭಾ ಇದ್ದಲ್ಲಿ ಸುದ್ದಿ ಇರುತ್ತದೆ ಮಾರಾಯ್ರೆ!

- ಪ್ರಶಾಂತ್ ನಾತು, 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ