Asianet Suvarna News Asianet Suvarna News

‘ಮನಮೋಹನ್ ಸಿಂಗ್ ವಿದೇಶಕ್ಕೆ ಹೋಗುವುದು, ಬರುವುದು ಯಾರ ಗಮನಕ್ಕೂ ಬರುತ್ತಿರಲಿಲ್ಲ’: ಶಾ ಟಾಂಗ್

ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಸದಾ ಟೀಕಿಸುವ ಪ್ರತಿಪಕ್ಷಗಳಿಗೆ ಅಮಿತ್ ಶಾ ಸರಿಯಾಗಿ ಟಾಂಗ್ ನೀಡಿದ್ದಾರೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಕೈಗೊಂಡಿದ್ದ ವಿದೇಶ ಪ್ರವಾಸಕ್ಕಿಂತ ಮೋದಿಯವರ ಪ್ರವಾಸ ಕಡಿಮೆಯಿದೆ. ವ್ಯತ್ಯಾಸವೆಂದರೆ ಮನಮೋಹನ್ ಸಿಂಗ್ ರವರ ನಿರ್ಗಮನ ಮತ್ತು ಆಗಮನವನ್ನು ಯಾರೂ ಗಮನಿಸುತ್ತಿರಲಿಲ್ಲವೆಂದು ಅಮಿತ್ ಶಾ ಹೇಳಿದ್ದಾರೆ.

Difference Is When Manmohan Singh Was Abroad Nobody Noticed Amit Shah
  • Facebook
  • Twitter
  • Whatsapp

ನವದೆಹಲಿ (ಮೇ.04): ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಸದಾ ಟೀಕಿಸುವ ಪ್ರತಿಪಕ್ಷಗಳಿಗೆ ಅಮಿತ್ ಶಾ ಸರಿಯಾಗಿ ಟಾಂಗ್ ನೀಡಿದ್ದಾರೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಕೈಗೊಂಡಿದ್ದ ವಿದೇಶ ಪ್ರವಾಸಕ್ಕಿಂತ ಮೋದಿಯವರ ಪ್ರವಾಸ ಕಡಿಮೆಯಿದೆ. ವ್ಯತ್ಯಾಸವೆಂದರೆ ಮನಮೋಹನ್ ಸಿಂಗ್ ರವರ ನಿರ್ಗಮನ ಮತ್ತು ಆಗಮನವನ್ನು ಯಾರೂ ಗಮನಿಸುತ್ತಿರಲಿಲ್ಲವೆಂದು ಅಮಿತ್ ಶಾ ಹೇಳಿದ್ದಾರೆ.

ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಗಿಂತ ಮೋದಿಯವರ ಪ್ರವಾಸದ ಸಂಖ್ಯೆ ಕಡಿಮೆಯಿದೆ ಎನ್ನುವುದನ್ನು ದಾಖಲೆಗಳು ದೃಢಪಡಿಸುತ್ತದೆ ಎಂದು ಶಾ ಹೇಳಿದ್ದಾರೆ.  ಪ್ರಧಾನಿ ಮೋದಿಯವರು ವಿದೇಶಾಂಗ ನೀತಿಯನ್ನು ಒಬ್ಬರೇ ನಿರ್ವಹಿಸುತ್ತಾರೆ. ಕೆಲವು ಪ್ರಮುಖ ವಿದೇಶ ಪ್ರವಾಸಗಳಲ್ಲಿ ಸುಷ್ಮಾ ಸ್ವರಾಜ್ ರನ್ನು ಕರೆದುಕೊಂಡು ಹೋಗುವುದಿಲ್ಲವೆಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನು ಶಾ ತಳ್ಳಿ ಹಾಕಿದ್ದಾರೆ.

ಕಳೆದ 2 ವರ್ಷಗಳಲ್ಲಿ ಪ್ರಧಾನಿ ಮೋದಿಯವರು 27 ಅಂತರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದು, 43 ದೇಶಗಳಿಗೆ ಭೇಟಿ ನೀಡಿದ್ದಾರೆ.

Follow Us:
Download App:
  • android
  • ios