Asianet Suvarna News Asianet Suvarna News

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ನಡುವೆ ಒಡಕು ಸೃಷ್ಟಿ ಆಗಿದೆಯಾ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಜತೆಗಿನ ಮೈತ್ರಿ ಸರ್ಕಾರ ಎರಡನೇ ಅವಧಿ ಪೂರ್ಣ ಆಗುತ್ತಿದೆ. ಆದರೆ ಎರಡನೇ ಅವಧಿ ಪೂರ್ಣಗೊಳ್ಳುವ ಮುನ್ನವೇ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಡಕು ಸೃಷ್ಟಿ ಆಗಿದೆಯಾ? ಮೈತ್ರಿ ಸರ್ಕಾರದಲ್ಲಿ ಜನತಾದಳದ ಪಾಲಿಕೆ ಸದಸ್ಯರನ್ನು ಕಡೆಗಣಿಸಲಾಗ್ತಿದೆಯಾ? ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಅವಧಿಗೆ ನಮ್ಮ ಬೆಂಬಲ ಇಲ್ಲವೆಂದು ಕೈ ನಾಯಕರಿಗೆ ತೆನೆಹೊತ್ತ ಮಹಿಳೆ ಎಚ್ಚರಿಕೆ ನೀಡಿದ್ದೇಕೆ...? ಇದಕ್ಕೆ ಉತ್ತರ ಇಲ್ಲಿದೆ.

Differe of Opinion in Congress and JDS
  • Facebook
  • Twitter
  • Whatsapp

ಬೆಂಗಳೂರು (ಜೂ.28): ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಜತೆಗಿನ ಮೈತ್ರಿ ಸರ್ಕಾರ ಎರಡನೇ ಅವಧಿ ಪೂರ್ಣ ಆಗುತ್ತಿದೆ. ಆದರೆ ಎರಡನೇ ಅವಧಿ ಪೂರ್ಣಗೊಳ್ಳುವ ಮುನ್ನವೇ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಡಕು ಸೃಷ್ಟಿ ಆಗಿದೆಯಾ? ಮೈತ್ರಿ ಸರ್ಕಾರದಲ್ಲಿ ಜನತಾದಳದ ಪಾಲಿಕೆ ಸದಸ್ಯರನ್ನು ಕಡೆಗಣಿಸಲಾಗ್ತಿದೆಯಾ? ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಅವಧಿಗೆ ನಮ್ಮ ಬೆಂಬಲ ಇಲ್ಲವೆಂದು ಕೈ ನಾಯಕರಿಗೆ ತೆನೆಹೊತ್ತ ಮಹಿಳೆ ಎಚ್ಚರಿಕೆ ನೀಡಿದ್ದೇಕೆ...? ಇದಕ್ಕೆ ಉತ್ತರ ಇಲ್ಲಿದೆ.

ಕಳೆದ ವರ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆದ ಬಳಿಕ ಆಡಳಿತದಲ್ಲಿ ಸಮನ್ವಯದ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ ರಚಿಸುವಂತೆ ಜೆಡಿಎಸ್ ಒತ್ತಾಯಿಸಿತ್ತು. ಆ ಹಿನ್ನೆಲೆಯಲ್ಲಿ ಜನವರಿ 2017ರಲ್ಲಿ ರಚನೆ ಆದ ಸಮನ್ವಯ ಸಮಿತಿ ಸಭೆಯ ಮೊದಲ ಸಭೆ ಮೇಯರ್ ಪದ್ಮಾವತಿ ಅವರ ಮುಖ್ಯಸ್ಥಿಕೆಯಲ್ಲಿ ಜರುಗಿತು. ಈ ವೇಳೆ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸದಸ್ಯೆಯ ಮೇಲೆ ಹಲ್ಲೆ, ನಗರೋತ್ಥಾನ ಯೋಜನೆ ಜಾರಿಯಲ್ಲಿ ಜೆಡಿಎಸ್ ಸ್ಥಾಯಿ ಸಮತಿ ಅಧ್ಯಕ್ಷರ ಕಡೆಗಣನೆ, ಹಾಗೂ ಆರ್.ಆರ್.ನಗರದ ಜಂಟಿ ಆಯುಕ್ತ ತಿಪ್ಪೇಸ್ವಾಮಿ ದುರ್ವತನೆ ಕುರಿತಂತೆ ತೀವ್ರ ಅಸಮಾಧಾನವನ್ನು ಜೆಡಿಎಸ್ ನಾಯಕರು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ವಿಚಾರಗಳು ಆಲಿಸಿದ ಮೇಯರ್ ಪದ್ಮಾವತಿ ಸಂಬಂಧಪಟ್ಟ ಅಧಿಕಾರಿಗಳು ಕರೆಸಿ ಸಮಸ್ಯೆ ಪರಿಹರಿಸುವ ಭರವಸೆ  ನೀಡಿದ್ದಾರೆ.

ಇದಾದ ಬಳಿಕ ಆರ್.ಆರ್.ನಗರದ ಪಾಲಿಕೆ ಅಧಿಕಾರಿಗಳ ಸಭೆಯನ್ನು ಮೇಯರ್ ನಡೆಸಿದರು. ಜಂಟಿ ಆಯುಕ್ತ ತಿಪ್ಪೇಸ್ವಾಮಿ ಅಮಾನತ್ತಿಗೆ ಜೆಡಿಎಸ್ ನಾಯಕರು ಆಗ್ರಹಿಸಿದ್ದು, ಆ ಬಗ್ಗೆ ಬಿಸಿ-ಬಿಸಿ ಚರ್ಚೆಗಳು ಆಯಿತು. ಈ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಪಾಲಿಕೆ ಸದಸ್ಯರಾದ ಆಶಾ ಸುರೇಶ್ , ಮಮತಾ ವಾಸುದೇವ ಹಾಗೂ ಮಂಜುಳಾ ನಾರಾಯಣಸ್ವಾಮಿ ಉಪಸ್ಥಿತರಿದ್ದರು.ಅಧಿಕಾರಿಗಳ ದುರ್ವರ್ತನೆ ಕುರಿತು ತೀವ್ರ ರೀತಿಯಲ್ಲಿ ಮಹಿಳಾ ಕಾರ್ಪೋರೇಟರ್ಸ್ ಪ್ರತಿರೋಧ ವ್ಯಕ್ತಪಡಿಸಿದರು. ತಮ್ಮ ಬೇಡಿಕೆ ಈಡೇರದಿದ್ದರೆ ನಾಳೆ ನಡೆಯುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಗಲಿಬಿಲಿಯಾದ ಮೇಯರ್ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಆರ್ .ಆರ್.ನಗರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ವಿವರವನ್ನು ಒಳಗೊಂಡ ವರದಿಯನ್ನು 15 ದಿನದ ಒಳಗೆ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ಮಾಡಿದ್ದಾರೆ.

 

 

 

 

 

 

 

 

 

 

 

 

 

Follow Us:
Download App:
  • android
  • ios