ಮಡಿಕೇರಿ (ಡಿ.27): ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ದಿಡ್ಡಳ್ಳಿಯ ನಿರಾಶ್ರಿತರಿಗೆ ಸವಲತ್ತುಗಳ ಮಹಾಪೂರವೇ ಹರಿದು ಬರುತ್ತಿದೆ.

ಏಕಾಏಕಿ ಅರಣ್ಯ ಇಲಾಖೆ ದಾಳಿಯಿಂದ ಸೂರು ನೆಲೆ ಕಳೆದುಕೊಂಡಿರುವ ಮಂದಿಗೆ ಸದ್ಯಕ್ಕೆ ಟಾರ್ಪಲ್  ಮತ್ತು ಮೂರು ಹೊತ್ತಿನ ಊಟ ಸಿಗುವ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಡಳಿತ ನೀಡುತ್ತಿರುವ ಸವಲತ್ತುಗಳಿಗೆ ಗಿರಿಜನ ವಾಸಿಗಳು ಖುಷಿಯಾಗಿದ್ದಾರೆ. ತಮ್ಮ ಹೋರಾಟಕ್ಕೆ ಸಿಕ್ಕ ಜಯ ಎನ್ನುವ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ.

ದಿನವೊಂದಕ್ಕೆ ಒಂದು ಕ್ವಿಂಟಾಲ್ 10 ಕೆ.ಜಿ ಅಕ್ಕಿ ಅವಶ್ಯಕತೆ ಇದೆ. ಎರಡು ಹೊತ್ತು ಅನ್ನ ಸಾಂಬಾರ್,ಪಲ್ಯ,ಉಪ್ಪಿನ ಕಾಯಿ ಸೇರಿದಂತೆ ಬೆಳಗ್ಗಿನ ಹೊತ್ತಿಗೆ ವಿವಿಧ ರೈಸ್ ಐಟಂಗಳು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಪೂರ್ಣ ಜವಬ್ದಾರಿಯನ್ನು ಕುಶಾಲನಗರದ ಕ್ಯಾಟರಿಂಗ್ ವೊಬ್ಬರಿಗೆ ಸಮಾಜ ಕಲ್ಯಾಣ ಇಲಾಖೆ ನೀಡಿದೆ.