ಪ್ರತಿದಿನ ಸುದ್ದಿ ವಾಹಿನಿಗಳಲ್ಲಿ ವರದಿಗಾರರು ಹಲವಾರು ಘಟನೆಗಳ ಕುರಿತಾಗಿ ಲೈವ್ ರಿಪೋರ್ಟಿಂಗ್ ನೀಡುವುದನ್ನು ನಾವು ನೋಡುತ್ತಿರುತ್ತೇವೆ. ಇನ್ನು ಕೆಲ ವರದಿಗಾರರು ತಮ್ಮ ವರದಿ ವಿಭಿನ್ನವಾಗಿರಬೇಕೆಂಬ ನಿಟ್ಟಿನಲ್ಲಿ ಅಪಾಯಗಳಿದ್ದರೂ ಸಾಹಸ ಪ್ರದರ್ಶಿಸಿ ವರದಿ ಮಾಡುವುದೂ ಇದೆ. ಇದೇ ರೀತಿ ವಿಭಿನ್ನವಾಗಿ ರಿಪೋರ್ಟ್ ಮಾಡಲೆಂದು ಅಪಾಯವಿದ್ದರೂ ತಲೆಕೆಡಿಸಿಕೊಳ್ಳದ ಪಾಕ್ ವರದಿಗಾರ್ತಿಯೊಬ್ಬಳು ಕ್ರೇನ್ ಮೇಲಿನಿಂದ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕೆಳಬಿದ್ದಿದ್ದಾಳೆ. ಇದು ಬರೋಬ್ಬರಿ ಒಂದು ವರ್ಷ ಹಿಂದಿನ ವಿಡಿಯೋ ಆಗಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಘಟನೆಯ ಬಳಿಕ ಆ ವರದಿಗಾರ್ತಿಗೇನಾಯಿತು? ಇಂದು ಆಕೆಯ ಸ್ಥಿತಿ ಹೇಗಿದೆ? ಇಲ್ಲಿದೆ ವಿವರ
ಇಸ್ಲಮಾಬಾದ್(ಜು.01): ಪ್ರತಿದಿನ ಸುದ್ದಿ ವಾಹಿನಿಗಳಲ್ಲಿ ವರದಿಗಾರರು ಹಲವಾರು ಘಟನೆಗಳ ಕುರಿತಾಗಿ ಲೈವ್ ರಿಪೋರ್ಟಿಂಗ್ ನೀಡುವುದನ್ನು ನಾವು ನೋಡುತ್ತಿರುತ್ತೇವೆ. ಇನ್ನು ಕೆಲ ವರದಿಗಾರರು ತಮ್ಮ ವರದಿ ವಿಭಿನ್ನವಾಗಿರಬೇಕೆಂಬ ನಿಟ್ಟಿನಲ್ಲಿ ಅಪಾಯಗಳಿದ್ದರೂ ಸಾಹಸ ಪ್ರದರ್ಶಿಸಿ ವರದಿ ಮಾಡುವುದೂ ಇದೆ. ಇದೇ ರೀತಿ ವಿಭಿನ್ನವಾಗಿ ರಿಪೋರ್ಟ್ ಮಾಡಲೆಂದು ಅಪಾಯವಿದ್ದರೂ ತಲೆಕೆಡಿಸಿಕೊಳ್ಳದ ಪಾಕ್ ವರದಿಗಾರ್ತಿಯೊಬ್ಬಳು ಕ್ರೇನ್ ಮೇಲಿನಿಂದ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕೆಳಬಿದ್ದಿದ್ದಾಳೆ. ಇದು ಬರೋಬ್ಬರಿ ಒಂದು ವರ್ಷ ಹಿಂದಿನ ವಿಡಿಯೋ ಆಗಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಘಟನೆಯ ಬಳಿಕ ಆ ವರದಿಗಾರ್ತಿಗೇನಾಯಿತು? ಇಂದು ಆಕೆಯ ಸ್ಥಿತಿ ಹೇಗಿದೆ? ಇಲ್ಲಿದೆ ವಿವರ
ಉತ್ತಮವಾಗಿಯೇ ವರದಿ ಆರಂಭಿಸಿದ್ದ ಈ ವರದಿಗಾರ್ತಿ ಕೆಲವೇ ಕ್ಷಣಗಳಲ್ಲಿ ತೊದಲಾರಂಭಿಸುತ್ತಾಳಲ್ಲದೆ, ಆಕೆಯ ಕಣ್ಣುಗಳು ಸ್ಥಿರವಾಗುತ್ತವೆ ಹಾಗೂ ನಡುಕ ಶುರುವಾಗುತ್ತದೆ. ಬಳಿಕ ನಡೆದ ಘಟನೆ ನೋಡಿದರೆ ಶಾಕ್ ಆಗುತ್ತದೆ. ಯಾಕೆಂದರೆ ಮುಂದಿನ ಎರಡು ಸೆಕೆಂಡ್'ಗಳಲ್ಲಿ ಕ್ರೇನ್ ಮೇಲಿದ್ದ ಆಕೆ ಅಷ್ಟೆತ್ತರದಿಂದ ಕೆಳ ಬೀಳುತ್ತಾಳೆ. ಆಕೆ ಬಿದ್ದ ಸಂದರ್ಭದಲ್ಲಿ ಆ ಸ್ಥಳದಲ್ಲಿ ಹಲವಾರು ಮಂದಿ ಇದ್ದರೂ ಆಕೆ ಕೆಳ ಬೀಳುವುದನ್ನು ತಪ್ಪಿಸಲಾಗಲಿಲ್ಲ. ಯಾಕೆಂದರೆ ಈ ವರದಿಗಾರ್ತಿ ಹೀಗೆ ಬೀಳಬಹುದು ಎಂಬ ಸಣ್ಣ ಊಹೆ ಕೂಡಾ ಅವರು ಮಾಡಿರಲಿಲ್ಲ ಆದರೆ ಈಕೆ ಬೀಳುತ್ತಿದ್ದಂತೆಯೇ ಜನರೆಲ್ಲಾ ಒಗ್ಗೂಡಿದ್ದಾರೆ.
ಇನ್ನು ಈಕೆ ಬೀಳುತ್ತಿದ್ದಂತೆಯೇ ಅತ್ತ ಕ್ರೇನ್ ಹಿಡಿದಿದ್ದ ಓರ್ವ ಯುವಕನೊಬ್ಬ ನೇತಾಡುತ್ತಾ ಮೇಲೆ ಹೋಗುತ್ತಿರುವ ದೃಶ್ಯಗಳೂ ಕಂಡು ಬರುತ್ತವೆ. ಹೀಗಾಗಿ ವರದಿಗಾರ್ತಿ ಕ್ರೇನ್ ಮೇಲೆ ಕುರ್ಚಿ ಮೇಲೆ ಕುಳಿತು ವರದಿ ಮಾಡುತ್ತಿದ್ದ ವೇಳೆ ಆ ಯುವಕ ಕ್ರೇನ್'ನನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದ. ಆದರೆ ಆಕೆ ಬೀಳುತ್ತಿದ್ದಂತೆಯೇ ಭಾರ ಕಡಿಮೆಯಾಗಿದ್ದರಿಂದ ಮೇಲೆ ಹೋಗಿದ್ದಾನೆಂಬುದನ್ನು ಅಂದಾಜಿಸಬಹುದು.
ಆಕೆ ಬಿದ್ದ ಬಳಿಕ ನಡೆದದ್ದೇನು?
ವರದಿಗಾರ್ತಿ ಕೆಳ ಬಿದ್ದ ಸಂದರ್ಭದಲ್ಲಿ ಜನರೇನೋ ಅಲ್ಲಿ ಆಗಮಿಸಿದರು ಆದರೆ ಹೀಗೆ ಸಾಹಸಮಯ ವರದಿ ಮಾಡುತ್ತಿದ್ದಾಗ ಅಲ್ಲಿ ರಕ್ಷಣಾ ಸಿಬ್ಬಂದಿಗಳೇ ಇರಲಿಲ್ಲ ಎಂಬುವುದು ದುರಂತ. ಇನ್ನು ಆ ಕೂಡಲೇ ಆ್ಯಂಬುಲೆನ್ಸ್ ಕರೆಸಲಾಗಿತ್ತಾದರೂ ಟ್ರಾಫಿಕ್ ಸಮಸ್ಯೆ ಇದ್ದುದರಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ತಡವಾಯಿತು ಹೀಗಾಗಿ ಆಕೆ ಅಸು ನೀಗಿದ್ದಾಳೆ ಎಂಬ ಮಾತುಗಳು ಅಂದು ಕೇಳಿ ಬಂದಿದ್ದವು.
ಸತ್ತವಳು ಬದುಕಿದ್ದು ಹೇಗೆ?
ಇದು ಒಂದು ವರ್ಷದ ಹಿಂದಿನ ವಿಡಿಯೋ ಆಗಿದ್ದು, ಆಕೆಯ ಸಾವಿನ ಕುರಿತಾದ ಮಾತುಗಳು ಕೇಳಿ ಬಂದಿದ್ದವು. ಬಳಿಕ ಈ ಕುರಿತಾಗಿ ಯಾರೂ ಮಾತನಾಡಿರಲಿಲ್ಲ. ಆದರೆ ಘಟನೆಯಲ್ಲಿ ಗಾಯಾಳುವಾಗಿದ್ದ ವರದಿಗಾರ್ತಿ ಮಾತ್ರ ಸತ್ತಿರಲಿಲ್ಲ. ಅಂದು ಆಕೆಗೆ ಸೂಕ್ತ ಚಿಕಿತ್ಸೆ ಒದಗಿಸಲಾಗಿತ್ತು. ಇಂದು ಆಕೆ ಓರ್ವ ಪ್ರಸಿದ್ಧ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಆಕೆ ಸತ್ತಿದ್ದಾಳೆ ಎಂಬುವುದು ಕೇವಲ ಗಾಳಿಸುದ್ದಿಯಾಗಿತ್ತು. ಆದರೆ ಕೆಲ ದಿನಗಳ ಹಿಂದಷ್ಟೇ ಈ ವಿಚಾರ ಪಾಕ್ ಅಂದು ಕ್ರೇನ್'ನಿಂದ ಬಿದ್ದಿದ್ದ ವರದಿಗಾರ್ತಿ, ಇಂದು ನಿರೂಪಕಿಯಾಗಿರುವ ಮಿರ್ಜಾ ಖಾನ್ ಗಮನಕ್ಕೆ ಬಂದಿದೆ. ಇದನ್ನು ನೋಡಿ ಅಚ್ಚರಿಯಾದ ಆಕೆ ಈ ಮಾತುಗಳನ್ನು ಹಬ್ಬಿಸಿದವರಿಗೆ;ಲ್ಲರಿಉಗೂ ಮಾತಿನ ಪೆಟ್ಗಟು ನೀಡಿದ್ದಾಳೆ.
ತನ್ನ ಅಕೌಂಟ್'ನಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಮಿರ್ಜಾ ಖಾನ್ 'ನಾನು ಕಳೆದ ಒಂದು ವರ್ಷದಿಂದ ಸತ್ತಿದ್ದೇನೆ ಎಂಬ ವಿಚಾರ ನನಗೆ ತಿಳಿದಿರಲೇ ಇಲ್ಲ. ಒಂದು ವೇಳೆ ನಾನು ಸತ್ತಿದ್ದೇನೆ ಎಂದಾದರೆ ಪ್ರತಿದಿನ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಯಾರು?' ಎಂದು ಕೇಳಿದ್ದಾರೆ.
