ನ್ಯೂ ಜೆರ್ಸಿ[ಡಿ.12]: ಉಂಗುರದಂತಹ ಸಣ್ಣ ವಸ್ತು ಕಾಣೆಯಾದರೆ ಎಂದಾದರೂ ಸಿಗುವುದುಂಟೇ! ಆದರೆ, ಅಮೆರಿಕದ ನ್ಯೂಜೆರ್ಸಿಯ ಮಹಿಳೆಯ್ಬೊಳು ಎಷ್ಟುಅದೃಷ್ಟವಂತೆ ಅಂದರೆ ಆಕೆಯ ಉಂಗುರ ಕಳೆದುಹೋಗಿ 9 ವರ್ಷದ ಬಳಿಕ ಪತ್ತೆಯಾಗಿದೆ.

ಫೌಲಾ ಸ್ಟಾನ್‌ಟನ್‌ ಎಂಬಾಕೆ 2009ರಲ್ಲಿ ಬಾತ್‌ರೂಮ್‌ ಸ್ವಚ್ಛಗೊಳಿಸುತ್ತಿದ್ದಾಗ ಕೈಯಲ್ಲಿದ್ದ ವಜ್ರದ ಉಂಗುರ ಕಳಚಿ ಬಿದ್ದು ಚರಂಡಿ ಸೇರಿತ್ತು. 20ನೇ ವರ್ಷದ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಗಂಡ ನೀಡಿದ್ದ ದುಬಾರಿ ಉಂಗುರ ಮತ್ತೆಂದೂ ಸಿಗುವುದೇ ಇಲ್ಲ ಎಂದು ಆಕೆ ಆಸೆಯೂ ಬಿಟ್ಟಿದ್ದಳು.

ಆದರೆ, ಪೌರ ಕಾರ್ಮಿಕರು ಚರಂಡಿಯನ್ನು ಸ್ವಚ್ಛಗೊಳಿಸುವಾಗ ಮನೆಯಿಂದ 400 ಅಡಿ ದೂರದ ಮ್ಯಾನ್‌ಹೋಲ್‌ನಲ್ಲಿ ಉಂಗುರ ಪತ್ತೆಯಾಗಿದ್ದು, ಅದನ್ನು ಮನೆಗೆ ತಂದುಕೊಟ್ಟಿದ್ದಾರೆ.