ಜುಲೈ 29ರಂದು ಧ್ರುವ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದಾಗಲೇ ಪೊಲೀಸರು ಅವರ ಹೇಳಿಕೆ ಪಡೆಯಲು ಯತ್ನಿಸಿದ್ದರು. ಆದರೆ, ಕೊಲಂಬಿಯಾ ಆಸ್ಪತ್ರೆಯಲ್ಲಿ ಧ್ರುವ್ ಮಾತನಾಡುವ ಸ್ಥಿತಿಯಲ್ಲೂ ಇರದೇ ಇದ್ದರಿಂದ ಆತ ಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಕಾಯಲು ಪೊಲೀಸರು ನಿರ್ಧರಿಸಿದ್ದರು. ಆದರೆ, ದುರದೃಷ್ಟವಶಾತ್ ಪೊಲೀಸರು ಮಾಹಿತಿ ಪಡೆಯುವ ಮೊದಲೇ ಧ್ರುವ್ ಇಹಲೋಕ ತ್ಯಜಿಸಿದ್ದಾರೆ.

ಬೆಂಗಳೂರು(ಆ. 01): ಸ್ಯಾಂಡಲ್ವುಡ್ ನಟ, ಸಿಸಿಎಲ್ ಕ್ರಿಕೆಟಿಗ ಹಾಗೂ ಉದ್ಯಮಿ ಧ್ರುವ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವುದು ಖಚಿತವಾಗಿದೆ. ಪೊಲೀಸರು ಎಫ್'ಐಆರ್ ಕೂಡ ದಾಖಲಿಸಿಕೊಳ್ಳಲು ನಿರ್ಧರಿಸಿದ್ದಾರೆ. ಧ್ರುವ್ ಶರ್ಮಾ ಜುಲೈ 29ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗಿದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುವರ್ಣನ್ಯೂಸ್'ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಧ್ರುವ್ ಶರ್ಮಾ ಆತ್ಮಹತ್ಯೆಗೆ ಬ್ಯುಸಿನೆಸ್ ಲಾಸ್ ಕಾರಣವಾಗಿದೆ. ತಂದೆ ಸುರೇಶ್ ಶರ್ಮಾ ಅವರು ರಾಜಾನುಕುಂಟೆಯ ಸಿಂಗಾಪುರ ರಸ್ತೆಯಲ್ಲಿ ವೆಟರ್ನರಿ ಪ್ರಾಡಕ್ಟ್'ಗಳ ಕಂಪನಿಯನ್ನು ಧ್ರುವ್'ಗೆ ಮಾಡಿಕೊಟ್ಟಿದ್ದರು. ಈ ಕಂಪನಿಯ ಏಳ್ಗೆಗಾಗಿ ಧ್ರುವ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಆದರೆ, ಕಂಪನಿಯಿಂದ ನಿರೀಕ್ಷಿತ ಲಾಭ ಬರುತ್ತಿರಲಿಲ್ಲವೆನ್ನಲಾಗಿದೆ. ಕಂಪನಿಯ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಧ್ರುವ್ ಮತ್ತವರ ತಂದೆ ನಡುವೆ ಜಗಳವಾಗಿ ಮನಸ್ತಾಪವಾಗಿದ್ದವೆನ್ನಲಾಗಿದೆ. ಕಂಪನಿಯ ನಷ್ಟ, ತಂದೆಯೊಂದಿಗಿನ ಮನಸ್ತಾಪದ ವಿಚಾರಗಳು ಧ್ರುವ್'ರನ್ನು ಖಿನ್ನತೆಗೆ ತಳ್ಳಿದೆ. ಇದರಿಂದ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಿರಬಹುದೆಂದು ಶಂಕಿಸಲಾಗಿದೆ.

ಜುಲೈ 29ರಂದು ಧ್ರುವ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದಾಗಲೇ ಪೊಲೀಸರು ಅವರ ಹೇಳಿಕೆ ಪಡೆಯಲು ಯತ್ನಿಸಿದ್ದರು. ಆದರೆ, ಕೊಲಂಬಿಯಾ ಆಸ್ಪತ್ರೆಯಲ್ಲಿ ಧ್ರುವ್ ಮಾತನಾಡುವ ಸ್ಥಿತಿಯಲ್ಲೂ ಇರದೇ ಇದ್ದರಿಂದ ಆತ ಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಕಾಯಲು ಪೊಲೀಸರು ನಿರ್ಧರಿಸಿದ್ದರು. ಆದರೆ, ದುರದೃಷ್ಟವಶಾತ್ ಪೊಲೀಸರು ಮಾಹಿತಿ ಪಡೆಯುವ ಮೊದಲೇ ಧ್ರುವ್ ಇಹಲೋಕ ತ್ಯಜಿಸಿದ್ದಾರೆ.

ಇದೇ ವೇಳೆ, ಧ್ರುವ ಶರ್ಮಾ ಅವರ ಮೃತದೇಹಕ್ಕೆ ಲಕ್ಷ್ಮೀಪುರದಲ್ಲಿರುವ ಚಿತಾಗಾರದಲ್ಲಿ ಮಧ್ಯಾಹ್ನ 2ಗಂಟೆಗೆ ಅತ್ಯಸಂಸ್ಕಾರ ಮಾಡುವ ಸಾಧ್ಯತೆ ಇದೆ.