ಡಿಜಿಪಿ ಒಂ ಪ್ರಕಾಶ್​ ಅವರು ಇಂದು ನಿವೃತ್ತಿಯಾಗಲಿದ್ದು, ಇಂದೇ ನೂತನ ಡಿಜಿ ಅಂಡ್​ ಐಜಿಪಿ ನೇಮಕ ಕೂಡ ಆಗಲಿದೆ. ಈಗಾಗಲೇ ರಾಜ್ಯ ಸರ್ಕಾರ ರೂಪಕ್​ ಕುಮಾರ್​  ದತ್ತಾ ಅವರ ನೇಮಕಕ್ಕೆ ಒಲವು ತೋರಿದ್ದು, ಕೇಂದ್ರ ಸೇವೆಯಿಂದ ಬಿಡುಗಡೆ ಗೊಳಿಸುವಂತೆ ಪತ್ರ ಬರೆದಿದೆ.

ಬೆಂಗಳೂರು(ಜ.31): ಡಿಜಿಪಿ ಒಂ ಪ್ರಕಾಶ್​ ಅವರು ಇಂದು ನಿವೃತ್ತಿಯಾಗಲಿದ್ದು, ಇಂದೇ ನೂತನ ಡಿಜಿ ಅಂಡ್​ ಐಜಿಪಿ ನೇಮಕ ಕೂಡ ಆಗಲಿದೆ. ಈಗಾಗಲೇ ರಾಜ್ಯ ಸರ್ಕಾರ ರೂಪಕ್​ ಕುಮಾರ್​ ದತ್ತಾ ಅವರ ನೇಮಕಕ್ಕೆ ಒಲವು ತೋರಿದ್ದು, ಕೇಂದ್ರ ಸೇವೆಯಿಂದ ಬಿಡುಗಡೆ ಗೊಳಿಸುವಂತೆ ಪತ್ರ ಬರೆದಿದೆ.

ಇಂದು ಮಧ್ಯಾಹ್ನದ ವೇಳೆಗೆ ಸರ್ಕಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದ್ದು, ರೂಪಕ್​​ ಕುಮಾರ್​ ದತ್ತ ಅವರೇ ಡಿಜಿ ಅಂಡ್​ ಐಜಿಪಿ ಆಗಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪ್ರಧಾನ ಕಚೇರಿಯಲ್ಲಿ ಸಂಜೆ 4.30ರ ಸಮಾರಿಗೆ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದ್ದು, ನೂತನ ಡಿಜಿ - ಐಜಿಪಿಗೆ ಓಂಪ್ರಕಾಶ್ ಅಧಿಕಾರಿ ಹಸ್ತಾಂತರಿಸಲಿದ್ದಾರೆ.