ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ 'ಅಸಾಮಾನ್ಯ ಕನ್ನಡಿಗ' ದೇವರಾಜ್ ರೆಡ್ಡಿ ನಾಡಿನ ಮುಖ್ಯಮಂತ್ರಿಗಳಿಂದ ರಾಜ್ಯೋತ್ಸವ  ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇನ್ನಷ್ಟು ಮಾಹಿತಿಗಾಗಿ -> ಅಸಾಮಾನ್ಯ ಕನ್ನಡಿಗ: ಆಧುನಿಕ ಭಗೀರಥ ದೇವರಾಜ್ ರೆಡ್ಡಿ

ಬತ್ತಿ ಹೋಗಿದ್ದ, ಒಂದು ತೊಟ್ಟು ನೀರನ್ನೂ ಕೊಡದ 20 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಮರು ಜೀವ ಕೊಟ್ಟವರು, 5 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿ ಜಲಕ್ರಾಂತಿ ಮಾಡಿದ ಜಲಯೋಧ ಚಿತ್ರದುರ್ಗದ ದೇವರಾಜ್ ರೆಡ್ಡಿಯವರು, ಸುವರ್ಣ ನ್ಯೂಸ್-ಕನ್ನಡಪ್ರಭ ಕೊಡಮಾಡುವ 'ಅಸಾಮಾನ್ಯ ಕನ್ನಡಿಗ' ಪ್ರಶಸ್ತಿಗೆ ಭಾಜನರಾದ ಬೆನ್ನಲ್ಲೇ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಯೂ ಒಲಿದಿದೆ. ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಾಡಿನ ಮುಖ್ಯಮಂತ್ರಿಗಳಿಂದ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದಾರೆ.