ಮಠದ ಆವರಣದಲ್ಲಿ ಭಕ್ತರಿಂದ ಮೌನ ಪ್ರತಿಭಟನೆ | ಮಠಕ್ಕೆ ಸುತ್ತು ಹಾಕುತ್ತಾ, ಭಿತ್ತಿ ಪತ್ರ ಹಿಡಿದು ಪ್ರತಿಭಟನೆ
ಶಿವಮೊಗ್ಗ (ಅ. 08): ಗೋಕರ್ಣ ದೇವಸ್ಥಾನವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಲಲು ಮುಂದಾಗುತ್ತಿರುವುದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿರುವ ಶ್ರೀರಾಮಚಂದ್ರಪುರ ಮಠದಲ್ಲಿ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.
ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಸ್ತಾಪ ಹಿನ್ನಲೆಯಲ್ಲಿ , ಭಕ್ತರು ಮಠದ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ.
ಮಠಕ್ಕೆ ಸುತ್ತು ಹಾಕುತ್ತಾ, ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ತನ್ನ ಮೇಲಿನ ಆಕ್ರಮಣಗಳನ್ನು ಸಹಿಸಿದ್ದೇನೆ, ಆದರೆ ಮಠದ ಮೇಲಿನ ಆಕ್ರಮಣ ಸಹಿಸಲ್ಲ
ರಾಘವೇಶ್ವರ ಶ್ರೀ
ಶ್ರೀರಾಮಚಂದ್ರಾಪುರ ಮಠ ಭಕ್ತರಿಗೆ ಸೇರಿದ್ದು, ಸರ್ಕಾರದ ಕೃಪಾ ಪೋಷಿತ ಮಠ ಅಲ್ಲ ಎಂದು ರಾಘವೇಶ್ವರ ಶ್ರೀ ಗಳು ಹೇಳಿದ್ದಾರೆ.
ತಮ್ಮ ಮೇಲಿನ ಆಕ್ರಮಣಗಳನ್ನು ಸಹಿಸಿದ್ದೇನೆ ಆದರೆ ಮಠದ ಮೇಲಿನ ಆಕ್ರಮಣ ಸಹಿಸಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಶಿವಮೊಗ್ಗದಲ್ಲಿ ಹೇಳಿದ್ದಾರೆ.
