ಆಂಧ್ರಪ್ರದೇಶದ ವಿಜಯವಾಡದ ಉದ್ಯಮಿ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನಿಗೆ ಸುಮಾರು 8.36 ಕೋಟಿ ರು. ಮೌಲ್ಯದ ‘ಸಹಸ್ರ ನಾಮ ಮಾಲಾ’ (ಚಿನ್ನದ ಹಾರ) ಉಡುಗೊರೆಯಾಗಿ ಅರ್ಪಿಸಿದ್ದಾರೆ.
ತಿರುಪತಿ(ಸೆ.25): ಆಂಧ್ರಪ್ರದೇಶದ ವಿಜಯವಾಡದ ಉದ್ಯಮಿ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನಿಗೆ ಸುಮಾರು 8.36 ಕೋಟಿ ರು. ಮೌಲ್ಯದ ‘ಸಹಸ್ರ ನಾಮ ಮಾಲಾ’ (ಚಿನ್ನದ ಹಾರ) ಉಡುಗೊರೆಯಾಗಿ ಅರ್ಪಿಸಿದ್ದಾರೆ.
ಒಂಬತ್ತು ದಿನಗಳ ವಾರ್ಷಿಕ ಬ್ರಹ್ಮೋತ್ಸವ ಹಬ್ಬದ ಮೊದಲ ದಿನ, ಸುಮಾರು 28 ಕೆ.ಜಿ. ತೂಕ ತೂಗುವ, ವೆಂಕಟೇಶ್ವರ ದೇವರ 1008 ಪವಿತ್ರ ಹೆಸರುಗಳ 1008 ಚಿನ್ನದ ನಾಣ್ಯಗಳುಳ್ಳ ಬೃಹತ್ ಚಿನ್ನದ ಹಾರವನ್ನು ಉದ್ಯಮಿ ಭಕ್ತ ಎಂ. ರಾಮಲಿಂಗ ರಾಜು, ದೇವರಿಗೆ ಒಪ್ಪಿಸಿದ್ದಾರೆ.
ಸಿಎಂ ಎನ್. ಚಂದ್ರಬಾಬು ನಾಯ್ಡು ಉಪಸ್ಥಿತಿಯಲ್ಲಿ ಹಿರಿಯ ಅರ್ಚಕರು ಮತ್ತು ದೇವಳದ ಹಿರಿಯ ಅಧಿಕಾರಿಗಳಿಗೆ ರಾಮಲಿಂಗ ರಾಜು ಈ ಹಾರ ಸಮರ್ಪಿಸಿದರು. ಬ್ರಹ್ಮೋತ್ಸವದ ಸಂದರ್ಭ ರೇಷ್ಮೆ ವಸ್ತ್ರ ಅರ್ಪಿಸುವ ಸಾಂಪ್ರದಾಯಿಕ ಆಚರಣೆಯ ಹಿನ್ನೆಲೆಯಲ್ಲಿ ನಾಯ್ಡು ದೇವಸ್ಥಾನಕ್ಕೆ ಆಗಮಿಸಿದ್ದರು.
