ದೇವೇಗೌಡರೇ ನೀರು ಬಿಡಿ ಎಂದ ಮೇಲೆ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸೋದ್ಯಾಕೆ?

ಮಂಡ್ಯ(ಸೆ.11): ಕಾವೇರಿ ನದಿ ನೀರು ವಿಚಾರದಲ್ಲಿ ಜೆಡಿಎಸ್ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆಯಾ..? ಹೌದು, ಎನ್ನುವಂತಿದೆ ದೇವೇಗೌಡರ ಇಂದಿನ ಹೇಳಿಕೆ. ತಮಿಳುನಾಡಿಗೆ ನೀರು ಬಿಡಲು ನಾನೇ ಹೇಳಿದ್ದೆ ಎಂದು ಕೆಆರ್`ಎಸ್ ಭೇಟಿ ಸಂದರ್ಭ ಮಾಜಿ ಪ್ರಧಾನಿ ದೇವೇಗೌಡರು ಹೇಳಿಕೆ ನೀಡಿದ್ದಾರೆ.

ನೀರು ಬಿಡುವುದಕ್ಕೆ ನೀವೇ ಹೇಳಿ, ನಿಮ್ಮ ಶಾಸಕರು, ಸಂಸದರು ಮಂಡ್ಯ ಜಿಲ್ಲಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದ್ಯಾಕೆ..? ನೀರು ಬಿಡಿ ಎಂದ ಮೇಲೆ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸೋದ್ಯಾಕೆ? ಜೆಡಿಎಸ್ ಸಂಸದ ಪುಟ್ಟರಾಜು ನೇತೃತ್ವದಲ್ಲಿ ಸರಣಿ ಪ್ರತಿಭಟನೆ ನಡೆಯುತ್ತಿದೆ. ಹಾಗಾದರೆ, ಕಾವೇರಿ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ದ್ವಂದ್ವ ನಿಲುವು ಪ್ರದರ್ಶಿಸುತ್ತಿದ್ದಾರಾ..? ಕಾವೇರಿ ವಿಷಯದಲ್ಲಿ ರೈತರನ್ನು ಮನವೊಲಿಸಲು ಮಣ್ಣಿನ ಮಗನಿಗೆ ಸಾಧ್ಯವಿಲ್ಲವೇ? ನೀರು ಬಿಡುವುದರ ಅನಿವಾರ್ಯತೆಯನ್ನು ರೈತರಿಗೆ ವಿವರಿಸಬೇಕಿತ್ತಲ್ಲವೇ? ಬಂದ್​, ಗಲಾಟೆಯಿಂದ ರೈತರಿಗೇ ಆಗುವ ನಷ್ಟವನ್ನು ತಪ್ಪಿಸಬಹುದಿತ್ತಲ್ಲವೇ? ‘ರಾಜಕಾರಣ’ವನ್ನು ಅರಿಯದ ಮುಗ್ಧ ರೈತರಿಗೆ ಅರಿವು ಮೂಡಿಸಬಹುದಿತ್ತಲ್ಲವೇ? ಎಂಬ ಪ್ರಶ್ನೆಗಳು ಎದ್ದಿವೆ.