ಇನ್ನೇನು ಕೆಲವೇ ಕ್ಷಣಗಳಲ್ಲಿ ಜಿಎಸ್​ಟಿ ಪದ್ಧತಿ ಭಾರತದಾದ್ಯಂತ ಜಾರಿಗೆ ಬರಲಿದೆ. ಆದ್ರೆ ಭಾರತಕ್ಕೂ ಮುನ್ನ ಸುಮಾರು 160 ಕ್ಕೂ ಹೆಚ್ಚು ದೇಶಗಳಲ್ಲಿ ಜಿಎಸ್​ಟಿ ಜಾರಿಯಲ್ಲಿದೆ. 1945ರಲ್ಲಿ ಫ್ರಾನ್ಸ್ ಜಿಎಸ್‌ಟಿ ಪದ್ದತಿ ನೀತಿಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೊಳಿಸಿತು. ಆನಂತರ ವಿಶ್ವದ 160 ಕ್ಕೂ ಹೆಚ್ಚಿನ ದೇಶಗಳು ಈ ನೀತಿಯನ್ನು ಅಳವಡಿಸಿಕೊಂಡಿವೆ.

ಒಂದು ದೇಶ, ಒಂದೇ ತೆರಿಗೆ ಅಂತಾ ಜಿಎಸ್​ಟಿ ನೀತಿ ಜಾರಿಗೆ ತರೋಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪಾರ್ಲಿಮೆಂಟ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಜಿಎಸ್​ಟಿ ಜಾರಿಯಾಗಲಿದೆ. ಇನ್ನೂ ಭಾರತಕ್ಕೂ ಮೊದಲು ಸುಮಾರು 160 ಕ್ಕೂ ಹೆಚ್ಚು ದೇಶಗಳಲ್ಲಿ ಜಿಎಸ್​ಟಿ ಜಾರಿಯಲ್ಲಿದೆ. ಆ ದೇಶಗಳ ಜಿಎಸ್​ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇನ್ನೇನು ಕೆಲವೇ ಕ್ಷಣಗಳಲ್ಲಿ ಜಿಎಸ್​ಟಿ ಪದ್ಧತಿ ಭಾರತದಾದ್ಯಂತ ಜಾರಿಗೆ ಬರಲಿದೆ. ಆದ್ರೆ ಭಾರತಕ್ಕೂ ಮುನ್ನ ಸುಮಾರು 160 ಕ್ಕೂ ಹೆಚ್ಚು ದೇಶಗಳಲ್ಲಿ ಜಿಎಸ್​ಟಿ ಜಾರಿಯಲ್ಲಿದೆ. 1945ರಲ್ಲಿ ಫ್ರಾನ್ಸ್ ಜಿಎಸ್‌ಟಿ ಪದ್ದತಿ ನೀತಿಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೊಳಿಸಿತು. ಆನಂತರ ವಿಶ್ವದ 160 ಕ್ಕೂ ಹೆಚ್ಚಿನ ದೇಶಗಳು ಈ ನೀತಿಯನ್ನು ಅಳವಡಿಸಿಕೊಂಡಿವೆ. ಇನ್ನೂ ಭಾರತದ ಜಿಎಸ್​ಟಿ ಮಾದರಿ ಜೊತೆ ಕೆನಡಾ, ಯುಕೆ, ಸಿಂಗಪೂರ್ ಮತ್ತು ಮಲೇಷಿಯಾ ದೇಶಗಳ ಜಿಎಸ್​ಟಿ ಮಾದರಿಯನ್ನ ಹೋಲಿಕೆ ಮಾಡಿ ನೋಡೋದಾದ್ರೆ.

ಭಾರತದಲ್ಲಿ ಗೂಡ್ಸ್​ ಅಂಡ್ ಸರ್ವೀಸ್ ಟ್ಯಾಕ್ಸ್‌ನಲ್ಲಿ ಶೇ.5, 12, 18 ಮತ್ತು ಶೇ 28ರ ಭಾಗಗಳಲ್ಲಿ ಸ್ಟ್ಯಾಂಡರ್ಡ್​ ರೇಟ್ ಫಿಕ್ಸ್ ಮಾಡಲಾಗಿದೆ. ಇನ್ನು ಕೆನಡಾ ದೇಶದಲ್ಲಿ ಫೆಡರಲ್ ಗೂಡ್ಸ್ & ಸರ್ವೀಸ್ ಟ್ಯಾಕ್ಸ್ ಜೊತೆಗೆ ಹಾರ್ಮನೈಜ್ಡ್​ ಸೇಲ್ಸ್ ಟ್ಯಾಕ್ಸ್ ಜಾರಿಯಲ್ಲಿದ್ದು ಶೇ5% ರಷ್ಟು ಜಿಎಸ್​ಟಿ ಇದ್ದರೆ, ಶೇ 15ರಷ್ಟು HST ಇದೆ. ಇನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿ ವ್ಯಾಲ್ಯೂ ಌಡೆಡ್ ಟ್ಯಾಕ್ಸ್ ಜಾರಿಯಲ್ಲಿದ್ದು ಶೇ.20 ಮತ್ತು 5 ರ ಸ್ಟ್ಯಾಂಡರ್ಡ್​ ರೇಟ್ ಇದೆ. ಸಿಂಗಪೂರ್ ನಲ್ಲೂ ಕೂಡ GST ತೆರಿಗೆ ನೀತಿ ಇದ್ದು ಶೇ. 7 ರಷ್ಟು ಸ್ಟ್ಯಾಂಡರ್ಡ್​ ರೇಟ್ ಇದೆ. ಕೊನೆಯದಾಗಿ ಮಾಲೇಷಿಯಾದಲ್ಲು ಜಿಎಸ್‌ಟಿ ನೀತಿ ಜಾರಿಯಲ್ಲಿದ್ದು ಶೇ.6ರ ಸ್ಟಾಂಡರ್ಡ್​ ರೇಟ್ ಇದೆ.

ಒಟ್ಟಿನಲ್ಲಿ ಫ್ರಾನ್ಸ್ ನಿಂದ ಆರಂಭವಾಗಿ ವಿಶ್ವದ 160 ದೇಶಗಳ ಸಾಲಿಗೆ ಇಡೀಗ ಭಾರತ ಕೂಡ ಏಕರೂಪ ತೆರಿಗೆ ನೀತಿಯ ಸಾಲಿಗೆ ಸೇರ್ಪಡೆಯಾಗುತ್ತಿದೆ. ಜಿಎಸ್‌ಟಿ ಜಾರಿಯಾದ ನಂತರ ದೇಶದ ಆರ್ಥಿಕತೆ ವ್ಯವಸ್ಥೆ ಕೊಂಚ ಮಟ್ಟಿಗೆ ಸುಧಾರಣೆಯಾಗಲಿದೆ ಅನ್ನೋದು ತಜ್ಞರ ಅಭಿಪ್ರಾಯ.

ಧಾನ್ಯಶ್ರೀನ್ಯೂಸ್ಡೆಸ್ಕ್ಸುವರ್ಣನ್ಯೂಸ್