Asianet Suvarna News Asianet Suvarna News

10 ವರ್ಷ ಹಿಂದೆಯೂ ಕೊಡಗಲ್ಲಿ ಇಷ್ಟೇ ಮಳೆ, ಹಾನಿಯಿರಲಿಲ್ಲ..!

ವಾಡಿಕೆಯಂತೆ ಕೊಡಗು ಜೂನ್‌ನಿಂದ ಆಗಸ್ಟ್ 17ವರೆಗೆ ಜಿಲ್ಲೆಯಲ್ಲಿ 1948.4 ಮಿ.ಮೀ. ಮಳೆ ಕಾಣುತ್ತದೆ. ಆದರೆ, ಈ ಬಾರಿ ಇದೇ ಅವಧಿಯಲ್ಲಿ (ಜೂನ್‌ನಿಂದ ಆಗಸ್ಟ್ 17ವರೆಗೆ) ವಾಡಿಕೆಗಿಂತ ಶೇ.46ರಷ್ಟು ಹೆಚ್ಚು ಅಂದರೆ 2,847.6 ಮಿ.ಮೀ. ಹೆಚ್ಚಿನ ಮಳೆಯಾಗಿದೆ. ಈ ಭಾರಿ ಮಳೆಗೆ ಕೊಡಗು ಅಲ್ಲೋಲಕಲ್ಲೋಲವಾಗಿದೆ.

Despite Receiving Same Quantity of Rain 10 years Back Kodagu was Safe
Author
Bengaluru, First Published Aug 19, 2018, 11:34 AM IST

ಬೆಂಗಳೂರು(ಆ.19): ಕೊಡಗಿನಲ್ಲಿ ಜಲಪ್ರಳಯವನ್ನು ಸೃಷ್ಟಿಸಿ ಸಾವಿರಾರು ಜನರನ್ನು ಬೀದಿಪಾಲು ಮಾಡುತ್ತಿರುವ ಮಳೆ, ಜಿಲ್ಲೆ ಕಂಡ ದಶಕದ ಮಹಾಮಳೆಯಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಬರೋಬ್ಬರಿ ಒಂದು ದಶಕದ ಹಿಂದೆ ಹಾಲಿ ಮಳೆಗಿಂತಲೂ ಭೀಕರ ಮಳೆಯನ್ನು ಕೊಡಗು ಜಿಲ್ಲೆ ಕಂಡಿತ್ತು. ಆದರೆ, ಆಗ ಈ ಬಾರಿಯಷ್ಟು ಅನಾಹುತ ಸಂಭವಿಸಿರಲಿಲ್ಲ.

ವಾಡಿಕೆಯಂತೆ ಕೊಡಗು ಜೂನ್‌ನಿಂದ ಆಗಸ್ಟ್ 17ವರೆಗೆ ಜಿಲ್ಲೆಯಲ್ಲಿ 1948.4 ಮಿ.ಮೀ. ಮಳೆ ಕಾಣುತ್ತದೆ. ಆದರೆ, ಈ ಬಾರಿ ಇದೇ ಅವಧಿಯಲ್ಲಿ (ಜೂನ್‌ನಿಂದ ಆಗಸ್ಟ್ 17ವರೆಗೆ) ವಾಡಿಕೆಗಿಂತ ಶೇ.46ರಷ್ಟು ಹೆಚ್ಚು ಅಂದರೆ 2,847.6 ಮಿ.ಮೀ. ಹೆಚ್ಚಿನ ಮಳೆಯಾಗಿದೆ. ಈ ಭಾರಿ ಮಳೆಗೆ ಕೊಡಗು ಅಲ್ಲೋಲಕಲ್ಲೋಲವಾಗಿದೆ. ಆದರೆ, 2008-09ರಲ್ಲಿ ಜೂನ್‌ನಿಂದ ಆಗಸ್ಟ್ 17ರವರೆಗೆ ವಾಡಿಕೆಗಿಂತ ಶೇ.64ರಷ್ಟು ಹೆಚ್ಚಿನ ಮಳೆ ಅಂದರೆ 3,175.8 ಮಿ.ಮೀ. ಹೆಚ್ಚಿನ ಮಳೆಯಾಗಿತ್ತು. ಅದಕ್ಕಿಂತ ಹಿಂದೆ 1974ರಲ್ಲಿ 2,922.6 ಮಿ.ಮೀ. ಅಂದರೆ ಶೇ.50ರಷ್ಟು ಹೆಚ್ಚಿನ ಮಳೆಯಾಗಿತ್ತು.

2008-09ರಲ್ಲಿ ಭಾರಿ ಮಳೆಯಾಗಿದ್ದರೂ ಜನಜೀವನ ಅಸ್ತವ್ಯಸ್ತಗೊಳಿಸಿರಲಿಲ್ಲ. ರಸ್ತೆಗಳು ಕೊಚ್ಚಿಹೋಗಿರಲಿಲ್ಲ. ಭೂಕುಸಿತ ಉಂಟಾಗಿರಲಿಲ್ಲ. ಪ್ರಕೃತಿ ಅಷ್ಟು ಪ್ರಮಾಣದ ಮಳೆಯನ್ನು ತನ್ನಲ್ಲಿ ನುಂಗಿಕೊಂಡಿತ್ತು. ಹವಾಮಾನ ತಜ್ಞರ ಪ್ರಕಾರ ಕೊಡಗು ಜಿಲ್ಲೆಗೆ ಶೇ.46ರಷ್ಟು ಹೆಚ್ಚಿನ ಮಳೆ ದೊಡ್ಡ ಮಳೆಯಲ್ಲ. ಈ ಮಳೆಯನ್ನು ತಡೆಯುವ ಶಕ್ತಿ ಕೊಡಗು ಸೇರಿದಂತೆ ಮಲೆನಾಡು ಪ್ರದೇಶಕ್ಕಿದೆ. ಆದರೆ, ಈ ಬಾರಿ ಈ ಪ್ರಮಾಣದಲ್ಲಿ ಅನಾಹುತವಾಗಲು ಕಾರಣವೇನು ಎಂಬುದನ್ನು ಕಂಡುಕೊಳ್ಳಬೇಕಿದೆ. 

Follow Us:
Download App:
  • android
  • ios