ಬೆಂಗಳೂರು (ಡಿ. 01): ಡಾ ರಾಜ್ ಕುಮಾರ್,  ವಿಷ್ಣುವರ್ಧನ್ ಹಾಗೂ ಅಂಬರೀಶ್ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಬೇಕೆಂಬ ಚರ್ಚೆ ನಡುವೆಯೇ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ. 

‘ದುಷ್ಟ ಸಂಹಾರ' ಅನ್ನೋ ನಕಲಿ ಫೇಸ್ಬುಕ್ ಖಾತೆ ತೆರೆದು ಕಿಡಿಗೇಡಿಗಳು ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ.  ದೀಪಕ್ ದೇವಯ್ಯ, ಅರ್ಪಿತಾ ಭಟ್ ಹಾಗೂ ಅಬ್ದುಲ್ಲ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. 

ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ  ಸೂರ್ಯ ಮುಕುಂದ ರಾಜ್ ದೂರು ದಾಖಲು ಮಾಡಿದ್ದಾರೆ.  ಪ್ರಕರಣ ಸಂಬಂಧ ಹಲವರನ್ನ ವಶಕ್ಕೆ ಪಡೆದು ಸೈಬರ್ ಕ್ರೈಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.