Asianet Suvarna News Asianet Suvarna News

ಝೀರೋ ಟ್ರಾಫಿಕ್ ಸೌಲಭ್ಯ: ಡಿಸಿಎಂ ದರ್ಪ ಅಸಭ್ಯ!

ವಿವಿಐಪಿ ದರ್ಪ ಮೆರೆದ ಡಿಸಿಎಂ ಪರಮೇಶ್ವರ್! ಮಳೆ ನಡುವೆಯೂ ಝೀರೋ ಟ್ರಾಫಿಕ್ ಸೌಲಭ್ಯ! ಸೌಲಭ್ಯ ಇರುವುದೇ ಬಳಸಿಕೊಳ್ಳಲು ಎಂದ ಡಿಸಿಎಂ! ಝೀರೋ ಟ್ರಾಫಿಕ್ ಸೌಲಭ್ಯ ಇರುವುದು ಮಾಧ್ಯಮಗಳಿಗೆ ಹೊಟ್ಟೆಯುರಿ

Deputy CM Dr. G. Parameshwar says zero traffic during his convoy is a privilege
Author
Bengaluru, First Published Sep 26, 2018, 5:41 PM IST

ಬೆಂಗಳೂರು(ಸೆ.26): ನಿನ್ನೆ ಒಂದು ಕಡೆ ಸಿಲಿಕಾನ್ ಸಿಟಿ ಜನ ಮಳೆಯಿಂದ ತತ್ತರಿಸಿ ಹೋಗಿದ್ದರೆ, ಡಿಸಿಎಂ ಡಾ. ಜಿ. ಪರಮೇಶ್ವರ್ ಝೀರೋ ಟ್ರಾಫಿಕ್ ನಲ್ಲಿ ಸಂಚರಿಸಿ ಅಧಿಕಾರದ ದರ್ಪ ಮೆರೆದಿದ್ದರು. ಆದರೆ ಈ ಕುರಿತು ಮಾಧ್ಯಮಗಳು ಮಾಡಿದ ವರದಿಗೆ ಪರಮೇಶ್ವರ್ ಗರಂ ಆಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ, ಝಿರೋ ಟ್ರಾಫಿಕ್ ವ್ಯವಸ್ಥೆ ನನಗೂ ಇದೆ ಹೀಗಾಗಿ ಬಳಸಿಕೊಳ್ಳುತ್ತಿದ್ದೇನೆ. ಮಾಧ್ಯಮಗಳಿಗೆ ನನಗೆ ಈ ಸೌಲಭ್ಯ ಇರುವುದನ್ನು ಕಂಡು ಹೊಟ್ಟೆ ಉರಿ ಎಂದು ವ್ಯಂಗ್ಯವಾಡಿದ್ದಾರೆ.

ಕೊಡವ ಸಮಾಜ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಗರದ ಮಿಲ್ಲರ್ಸ್ ರಸ್ತೆಯ ಜಂಕ್ಷನ್ ಬಳಿ ಫೀಲ್ಡ್ ಮಾರ್ಷಲ್ ಕಾರಿಯಪ್ಪರವರ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ಇದರ ಉದ್ಘಾಟನಾ ಕಾರ್ಯಕ್ರಮಕ್ಕೆ ಡಿಸಿಎಂ ಪರಮೇಶ್ವರ್ ಅವರನ್ನು ಆಹ್ವಾನಿಸಲಾಗಿತ್ತು. ಇಂದು ಸಹ ಝಿರೋ ಟ್ರಾಫಿಕ್ ಮೂಲಕವೇ ಕಾರ್ಯಕ್ರಮಕ್ಕೆ ಡಿಸಿಎಂ ಆಗಮಿಸಿದ್ದರು.

ಝಿರೋ ಟ್ರಾಫಿಕ್ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಗೃಹ ಸಚಿವರಿಗೂ ಸಹ ಝಿರೋ ಟ್ರಾಫಿಕ್ ಅವಕಾಶ ನೀಡಲಾಗಿದೆ. ಹೀಗಾಗಿ ಇದನ್ನು ನಾನು ಬಳಸಿಕೊಳ್ಳುತ್ತಿದ್ದೇನೆ. ಝಿರೋ ಟ್ರಾಫಿಕ್ ಅಗತ್ಯ ಇದೆ ಎನ್ನುವುದರಿಂದ ಅವಕಾಶ ನೀಡಲಾಗಿದೆ. ಈ ಹಿಂದಿನ ಗೃಹ ಸಚಿವರು ಬೇಡ ಎಂದಿದ್ದರು.

ಹಾಗಂತ ನಾನು ಸಹ ಬೇಡ ಎನ್ನಬೇಕಿಲ್ಲ. ನನಗೆ ಇರುವ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ನಾನು ಝಿರೋ ಟ್ರಾಫಿಕ್ ತೆಗೆದುಕೊಳ್ಳುವುದು ಮಾಧ್ಯಮಗಳಿಗೆ ಹೊಟ್ಟೆ ಹುರಿ ಎನ್ನುವ ಮೂಲಕ ಮತ್ತೊಮ್ಮ ತಮ್ಮ ಅಧಿಕಾರದ ದರ್ಪ ತೋರಿದ್ದಾರೆ.

Follow Us:
Download App:
  • android
  • ios