500 ಹಾಗೂ 1000 ರೂ. ನೋಟುಗಳ ನಿಷೇಧದಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನಾನುನೂಲ ಉಂಟಾಗಿದ್ದು ಜನರು ಪರದಾಡುವಂತಾಗಿದೆ. ಇಂದು ರಾಜ್ಯದ ವಿವಿಧ ಕಡೆ ನಡೆದ ಘಟನೆಗಳಿವು.  

ಬೆಂಗಳೂರು(ನ.12): 500 ಹಾಗೂ 1000 ರೂ. ನೋಟುಗಳ ನಿಷೇಧದಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನಾನುನೂಲ ಉಂಟಾಗಿದ್ದು ಜನರು ಪರದಾಡುವಂತಾಗಿದೆ. ಇಂದು ರಾಜ್ಯದ ವಿವಿಧ ಕಡೆ ನಡೆದ ಘಟನೆಗಳಿವು.

ಕಿದ್ವಾಯ್​ ನಲ್ಲಿ ನೋಟು ಸ್ವೀಕರಿಸಿದೆ ರೋಗಿಗಳ ಪರದಾಟ

ದೇಶದೆಲ್ಲೆಡೆ ಹಣಕ್ಕಾಕಿ ಹಾಹಾಕಾರ ಶುರುವಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್ ಗಳಲ್ಲಿ 500, 1000 ಹಳೆ ನೋಟು ಪಡೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ಕಿದ್ವಾಯಿ ಆಸ್ಪತ್ರೆಯಲ್ಲಿ 500, 1000 ಹಳೆ ನೋಟುಗಳನ್ನು ಪಡೆಯೋದಿಲ್ಲ ಎಂದು ಸ್ಪಷ್ಟವಾಗಿ ಬೋರ್ಡ್ ಹಾಕಲಾಗಿದೆ. ಹೀಗಾಗಿ ರೋಗಿಗಳು ಪರದಾಡಿದರು. ಕಳೆದೆರಡು ದಿನಗಳಿಂದ ಮೆಡಿಕಲ್​ಲ್ಲಿ ಚಿಲ್ಲರೆ ನೀಡದೆ ರೋಗಿಗಳು, ರೋಗಿ ಸಂಬಂಧಿಕರು ಸಂಕಷ್ಟಕ್ಕೀಡಾಗಿದ್ದಾರೆ. ಚಿಲ್ಲರೆ ಬೇಕಾದ್ರೆ ವೈದ್ಯರ ಸಹಿ ಪಡೆದು ಮೆಡಿಸಿನ್ ಸ್ಲಿಪ್ ತರುವಂತೆ ಮೆಡಿಕಲ್ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಇತ್ತ ಆಸ್ಪತ್ರೆಯಲ್ಲಿ ವೈದ್ಯರುಗಳು ಎರಡನೆ ಶನಿವಾರವೆಂದು ವೈದ್ಯರುಗಳು ಡ್ಯೂಟಿಗೆ ಬಂದಿಲ್ಲ. ಹೀಗಾಗಿ ರೋಗಿಗಳಿಗೆ ದಿಕ್ಕು ತೋಚದಂತಾಗಿದೆ.

ಯಾದಗಿರಿಯಲ್ಲಿ ಬಹುತೇಕ ಎಟಿಎಂಗಳು ಬಂದ್

ಇನ್ನು ಯಾದಗಿರಿ ನಗರದಲ್ಲಿಂದು ಎಲ್ಲಾ ಬ್ಯಾಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಕೆಲ ಎಟಿಎಂಗಳು ಮಾತ್ರ ಗ್ರಾಹಕರ ಸೇವೆಗೆ ಮುಕ್ತವಾಗಿಲ್ಲ. ನಗರದ ವಿವಿಧ ಬ್ಯಾಂಕ್​ಗಳ ಮುಂದೆ ಜನರು ಬೆಳಗ್ಗೆಯೇ ಹಣಕ್ಕಾಗಿ ಕಾದು ಕುಳಿತಿರುವ ದೃಶ್ಯಗಳು ಕಂಡುಬಂತು. ಅಂಚೆ ಕಚೇರಿಯಯಲ್ಲಿ ಕೂಡ ಜನರು ರದ್ದು ಪಡಿಸಲಾದ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಂಡರು. ಆದರೆ ಹೊಸದಾದ 500 ರೂ ಚಲಾವಣೆಗೆ ಬಾರದ ಕಾರಣ ಹೊಸ 2000 ರೂಪಾಯಿಗಳನ್ನು ಪಡೆದ ಜನರು ಚಿಲ್ಲರೆಗಾಗಿ ಪರದಾಡುವಂತಾಗಿದೆ. ಇದರಿಂದಾಗಿ ಸಣ್ಣ ಪುಟ್ಟ ಅಂಗಡಿ, ಹೊಟೇಲ್, ಹಣ್ಣಿನ ವ್ಯಾಪಾರ ಸೇರಿ ಚಿಲ್ಲರೆ ಹಣದ ಕೊರತೆಯಿಂದ ವಹಿವಾಟು ಮಾಡಲು ಅಂಗಡಿ ಮಾಲಿಕರು ಹಿಂದಕ್ಕೆ ಸರಿಯುತ್ತಿರೋ ದೃಶ್ಯ ಕಂಡುಬಂತು.

ತುಮಕೂರಿನಲ್ಲಿ ನೋಟಿಗಾಗಿ ಜನರ ಪರದಾಟ

ನೋಟು ಬದಲಾವಣೆಗೆ ಹಾಗೂ ಡಿಪೋಸಿಟ್ ಮಾಡಲು ಇಂದು ಕೂಡಾ ಬ್ಯಾಂಕ್ ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ತುಮಕೂರು ಜಿಲ್ಲೆಯಲ್ಲೂ ಬೆಳಗ್ಗೆಯಿಂದಲೇ ಬ್ಯಾಂಕ್ ಗಳ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ನಗರದ ಎಸ್​​​​ಬಿಎಂ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಸೇರಿದಂತೆ ಹಲವೆಡೆ ಕ್ಯೂ ಸಾಮಾನ್ಯವಾಗಿತ್ತು. ಆದರೆ ಬಹುತೇಕ ಎಟಿಎಂಗಳು ಕಾರ್ಯಾರಂಭ ಮಾಡಲೇ ಇಲ್ಲ. ಹೀಗಾಗಿ ಜನರ ಪರದಾಡುವಂತಾಯ್ತು. ಕೆಲವರು ಎಟಿಎಂಗಳು ಕಾರ್ಯಾರಂಭ ಮಾಡಿದರೂ ಹಣ ಮುಗಿದಿದ್ದರಿಂದ ಜನರು ಪರದಾಡುವಂತಾಯ್ತು.

ಕೋಲಾರದಲ್ಲಿ ಹೊಸ ನೋಟು ಸಿಗದೆ ಜನರು ಕಂಗಾಲು

ಇನ್ನು ಕೋಲಾರ ಜಿಲ್ಲೆಯಲ್ಲಿ ಎಟಿಎಂಗಳಿಗೆ ಹೊಸ ನೋಟು ತಲುಪದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗಿದೆ. 500 , 1000 , ಮುಖಬೆಲೆಯ ನೋಟು ರದ್ದು ಹಿನ್ನಲೆಯಲ್ಲಿ ಎಟಿಎಂಗಳಲ್ಲಿ ಹಣವಿಲ್ಲದೇ ಗ್ರಾಹಕರು ಪರದಾಡುವಂತಾಗಿದೆ. ಕೇಳಿದರೆ ಸೊಮವಾರ ಹಣ ಬರುತ್ತೆ ಎಂದು ಎಟಿಎಂ ಸೆಕ್ಯೊರಿಟಿಗಳು ಸಿದ್ಧ ಉತ್ತರ ನೀಡುತ್ತಿದ್ದರು. ಇದರಿಂದ ದಿನ ನಿತ್ಯದ ಜೀವನಕ್ಕೆ ಹಣವಿಲ್ಲದೆ ಜನ ಪರದಾಡುವಂತಾಗಿದೆ. ಹಣ ವಿನಿಮಯ ಮಾಡಲು ಬ್ಯಾಂಕ್ ಗೆ ತೆರಳಿದರೆ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ ಅನ್ನೋದು ಗ್ರಾಹಕರ ಆರೋಪ.

ನೋಟಿಗಾಗಿ ನಿಂತಿದ್ದ ವೇಳೆ ಕುಸಿದು ಮೃತಪಟ್ಟ ವೃದ್ಧ

ಬ್ಯಾಂಕ್ ವ್ಯವಹಾರಕ್ಕೆ ಅಂತ ಬೆಳಗ್ಗೆನೇ ಬಂದಿದ್ದ ವೃದ್ಧರೊಬ್ಬರು, ಬ್ಯಾಂಕ್ ಆರಂಭವಾಗುವ ಮುನ್ನವೇ ಇಹಲೋಕ ತ್ಯಜಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ಅಜೆಕಾರು ಕಾರ್ಪೊರೇಷನ್ ಬ್ಯಾಂಕ್ ಗೆ ಅಂತ 96 ರ ವೃದ್ಧ ಗೋಪಾಲ ಶೆಟ್ಟಿ ಬಂದಿದ್ರು. ಇದ್ದಕ್ಕಿದ್ದಂತೆ ಬ್ಯಾಂಕ್ ಆವರಣದಲ್ಲೇ ಕುಸಿದುಬಿದ್ರು. ತಕ್ಷಣವೇ ಆಂಬುಲೆನ್ಸ್ ಬಂದ್ರೂ ಪ್ರಯೋಜನ ಆಗ್ಲಿಲ್ಲ. ವೃದ್ಧಾಪ್ಯ ಮತ್ತು ರಕ್ತದೊತ್ತಡ ಕಡಿಮೆ ಆಗಿರೋದೇ ಆವರ ಸಾವಿಗೆ ಕಾರಣ. ಬ್ಯಾಂಕ್ ಗಳಲ್ಲಿ ನೋಟಿನ ಅದಲು ಬದಲು ಕಾರ್ಯ ಬ್ಯುಸಿಯಾಗಿರೋದ್ರಿಂದ ಈ ಸಾವು ಗಮನ ಸೆಳೆದಿದೆ.