ಕೇಂದ್ರ ಸರ್ಕಾರ ದೊಡ್ಡ ಮುಖಬೆಲೆಯ ನೊಟುಗಳನ್ನು ನಿಷೇಧಿಸಿದ ಬಳಿಕ, ಅದನ್ನು ಬದಲಾಯಿಸಲು ಬ್ಯಾಂಕ್ ಸರತಿಯಲ್ಲಿ ನಿಂತಿದ್ದ ಸಿಯಾ ರಾಮ್ ಎಂಬ 70 ವರ್ಷದ ದಿನಗೂಲಿ ಕಾರ್ಮಿಕ ಮೃತಪಟ್ಟಿದ್ದರು.

ನವದೆಹಲಿ (ನ.21): ನೋಟು ನೀಷೇಧ ಕ್ರಮದಿಂದಾಗಿ ಮೃತಪಟ್ಟಿರುವ ಹಿರಿಯ ನಾಗರಿಕರೋರ್ವರ ಕುಟುಂಬ ಸದಸ್ಯರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕೇಂದ್ರ ಸರ್ಕಾರ ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕೆಂದು ಅರ್ಜಿದಾರರು ಹೇಳಿದ್ದಾರೆ.

ಕೇಂದ್ರ ಸರ್ಕಾರ ದೊಡ್ಡ ಮುಖಬೆಲೆಯ ನೊಟುಗಳನ್ನು ನಿಷೇಧಿಸಿದ ಬಳಿಕ, ಅದನ್ನು ಬದಲಾಯಿಸಲು ಬ್ಯಾಂಕ್ ಸರತಿಯಲ್ಲಿ ನಿಂತಿದ್ದ ಸಿಯಾ ರಾಮ್ ಎಂಬ 70 ವರ್ಷದ ದಿನಗೂಲಿ ಕಾರ್ಮಿಕ ಮೃತಪಟ್ಟಿದ್ದರು.

ಹೊಸ ನೊಟು ಪಡೆಯಲು ಸಿಯಾ ರಾಮ್ ಮೂರು ದಿನಗಳಿಂದ ಸರತಿಯಲ್ಲಿ ನಿಲ್ಲುತ್ತಿದ್ದರು, ನ.17 ರಂದು ಸರತಿಯಲ್ಲಿ ಕುಸಿದು ಬಿದ್ದು ಸಾವನಪ್ಪಿದ್ದಾರೆ ಎಂದುಅವರ ಮಗ ಕನ್ಹಯ್ಯ ಹೇಳಿದ್ದಾನೆ.

5 ಲಕ್ಷ ಜನಸಂಖ್ಯೆಯಿರುವ ನಗರದಲ್ಲಿ ಕೇವಲ 40 ಏಟಿಎಮ್’ಗಳಿದ್ದು, ಅವುಗಳು ಕೂಡಾ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಕನ್ಹಯ್ಯ ಅರ್ಜಿಯಲ್ಲಿ ಹೇಳಿದ್ದಾನೆ.

(ಸಾಂದರ್ಭಿಕ ಚಿತ್ರ)