ನವದೆಹಲಿ (ನ.13): ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ಇಂದು ಕೂಡಾ ಮುಂದುವರೆಸಿದ್ಧಾರೆ.

ನೋಟು ನಿಷೇಧ ಕ್ರಮವು, ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತನೆ ಮಾಡುವ ಇನ್ನೊಂದು ರೀತಿಯಾಗಿದೇ ಅಷ್ಟೇ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರೂ.1000 ನೋಟು ನಿಷೇಧಿಸಿ, ರೂ.2000 ನೋಟು ಪರಿಚಯಿಸುವುದರಿಂದ ಭ್ರಷ್ಟಚಾರ ಹೇಗೆ ನಿಲ್ಲುತ್ತದೆ ಎಂದು ಪ್ರಶ್ನಿಸಿರುವ ಕೇಜ್ರಿವಾಲ್, ಇಂತಹ ಕ್ರಮದಿಂದ ಭ್ರಷ್ಟಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೆಂದಿದ್ದಾರೆ.

ಕೇಂದ್ರ ಸರ್ಕಾರದ ನೋಟು ನೀತಿಯನ್ನು ದೊಡ್ಡ ಹಗರಣ ಎಂದು ನಿನ್ನೆ ಕೇಜ್ರಿವಾಲ್‌ ಬಣ್ಣಿಸಿದ್ದರು. ಪ್ರಧಾನಿ ಮೋದಿ ನೋಟು ರದ್ದು ಘೋಷಣೆ ಮಾಡುವ ಮೊದಲೇ ಈ ವಿಚಾರವನ್ನು ತನ್ನ ಎಲ್ಲ ಗೆಳೆಯರಿಗೆ ಬಿಜೆಪಿ ಹೇಳಿತ್ತು ಎಂದು ಅವರು ಆರೋಪಿಸಿದ್ದರು.