Asianet Suvarna News Asianet Suvarna News

ಅಮಾನ್ಯೀಕರಣವಾದ ನೋಟುಗಳನ್ನು ಪುಡಿ ಮಾಡಿ ವಿಲೇವಾರಿ :ಆರ್’ಬಿಐ

 ವಾಪಸ್ ಪಡೆದ ಕೊಟ್ಯಂತರ  ನೋಟುಗಳನ್ನೂ ಕೂಡ ಸಂಪೂರ್ಣವಾಗಿ ಪುಡಿ ಮಾಡಿ ವಿಲೇವಾರಿ ಮಾಡಲಾಗಿದೆ ಎಂದು ಆರ್’ಬಿಐ ಹೇಳಿದೆ.

Demonetised Notes are being Shredded Briquetted

ನವದೆಹಲಿ : ಕಳೆದ ವರ್ಷ ನವೆಂಬರ್’ನಲ್ಲಿ ದೇಶದಲ್ಲಿ ನೋಟು ಅಮಾನ್ಯೀಕರಣವನ್ನು ಕೈಗೊಳ್ಳಲಾಗಿತ್ತು. 500 ಹಾಗೂ 1000 ರು. ನೋಟುಗಳನ್ನು ಅಮಾನ್ಯ ಮಾಡಲಾಗಿತ್ತು. ಇವುಗಳನ್ನೆಲ್ಲವನ್ನೂ ಮತ್ತೆ ಬ್ಯಾಂಕ್’ಗೆ ಕಟ್ಟಿಸಿಕೊಳ್ಳಲಾಗಿದ್ದು, ಇವುಗಳನ್ನೆಲ್ಲಾ ಏನು ಮಾಡಿದರು ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕಾಡುವುದು ಸಾಮಾನ್ಯವಾಗಿರುತ್ತದೆ.

ಇದೀಗ ಈ ಕುತೂಹಲಕ್ಕೆ ಆರ್’ಬಿಐ ಉತ್ತರ ನೀಡಿದೆ. ವಾಪಸ್ ಪಡೆದ ಕೊಟ್ಯಂತರ ನೋಟುಗಳನ್ನೂ ಕೂಡ ಸಂಪೂರ್ಣವಾಗಿ ಪುಡಿ ಮಾಡಿ ವಿಲೇವಾರಿ ಮಾಡಲಾಗಿದೆ ಎಂದು ಆರ್’ಬಿಐ ಹೇಳಿದೆ.

ಈ ನೋಟುಗಳ ವೆರಿಫಿಕೇಶನ್ ಕಾರ್ಯವು ಮುಗಿದ ನಂತರ ಸಂಪೂರ್ಣ ನೋಟುಗಳನ್ನು ಪುಡಿ ಮಾಡಿ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದೆ. ಈ ಬಗ್ಗೆ ಸಲ್ಲಿಕೆಯಾಗಿದ್ದ ಆರ್’ಟಿಐ ಅರ್ಜಿಯೊಂದರ ಸಂಬಂಧ  ಈ ಉತ್ತರವನ್ನು ನೀಡಿದೆ. ಪ್ರಿಂಟ್ ಆದ ನೋಟುಗಳನ್ನು ಪುನರ್ ಬಳಕೆ ಪ್ರಕ್ರಿಯೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೂಡ ತಿಳಿಸಿದೆ.

Follow Us:
Download App:
  • android
  • ios