ಉತ್ತರ, ದಕ್ಷಿಣ ಹಾಗೂ ಪೂರ್ವ ಮೂರು ಪ್ರಾಂತ್ಯಗಳಲ್ಲಿಯೂ ಭಾರಿ ಮುನ್ನಡೆ ಸಾಧಿಸಿದೆ.

ನವದೆಹಲಿ(ಏ.26): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರ ಮುಂದಿನ ರಾಜಕೀಯ ನಿರ್ಧರಿಸುವ ಚುನಾವಣೆ ಎಂದೇ ಬಿಂಬಿಸಲಾದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು ಬಿಜೆಪಿ ಉತ್ತರ, ದಕ್ಷಿಣ ಹಾಗೂ ಪೂರ್ವ ಮೂರು ಪ್ರಾಂತ್ಯಗಳಲ್ಲಿಯೂ ಭಾರಿ ಮುನ್ನಡೆ ಸಾಧಿಸಿದೆ. ಆಡಳಿತರೂಢ ಅಮ್ಆದ್ಮಿ ಪಕ್ಷ ಮೂರನೇ ಸ್ಥಾನದಲ್ಲಿದ್ದು ಹಿನ್ನಡೆ ಸಾಧಿಸಿದೆ.

ಪ್ರಗತಿಯ ವಿವರ

ಉತ್ತರ: ಒಟ್ಟು ಸ್ಥಾನ 104, ಬಿಜೆಪಿ-40, ಕಾಂಗ್ರೆಸ್-7, ಎಎಪಿ-6

ಪೂರ್ವ: ಒಟ್ಟು ಸ್ಥಾನ: 64, ಬಿಜೆಪಿ:21,ಕಾಂಗ್ರೆಸ್-9, ಎಎಪಿ-6

ದಕ್ಷಿಣ: ಒಟ್ಟು ಸ್ಥಾನ :104, ಬಿಜೆಪಿ-44,ಕಾಂಗ್ರೆಸ್-14, ಎಎಪಿ-10

ಇನ್ನು ಕೆಲವೇ ಗಂಟೆಗಳಲ್ಲಿ ಫಲಿತಾಂಶದ ಪೂರ್ತಿ ಚಿತ್ರಣ ಲಭ್ಯವಾಗಲಿದೆ.