2028ಕ್ಕೆ ದೆಹಲಿ ಜಗತ್ತಲ್ಲೇ ಹೆಚ್ಚು ಜನ ಸಂಖ್ಯೆ ಇರುವ ನಗರ

Delhi Projected To Become Worlds Most Populous City Around 2028
Highlights

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಜನಸಂಖ್ಯಾ ವಿಭಾಗ ಸಿದ್ಧಪಡಿಸಿರುವ ಜಾಗತಿಕ ನಗರೀಕರಣ ಭವಿಷ್ಯ ವರದಿಯಲ್ಲಿ ಈ ಅಂಶಗಳನ್ನು ತಿಳಿಸಲಾಗಿದೆ.

ವಿಶ್ವಸಂಸ್ಥೆ(ಮೇ.17]: 2028ರ ವೇಳೆಗೆ ದೆಹಲಿ ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿ ಗುರುತಿಸಲ್ಪಡಲಿದೆ ಎಂದು ವಿಶ್ವಸಂಸ್ಥೆಯ ಅಂಕಿ ಅಂಶಗಳು ತಿಳಿಸಿವೆ. ಅಲ್ಲದೆ, 2050ರ ವೇಳೆಗೆ ಭಾರತ ಅತಿಹೆಚ್ಚು ನಗರವಾಸಿಗಳನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಜನಸಂಖ್ಯಾ ವಿಭಾಗ ಸಿದ್ಧಪಡಿಸಿರುವ ಜಾಗತಿಕ ನಗರೀಕರಣ ಭವಿಷ್ಯ ವರದಿಯಲ್ಲಿ ಈ ಅಂಶಗಳನ್ನು ತಿಳಿಸಲಾಗಿದೆ.

2050ರ ವೇಳೆಗೆ ಶೇ.68 ಮಂದಿ ನಗರಗಳಲ್ಲಿ ವಾಸಿಸಲಿದ್ದಾರೆ. ಪ್ರಸ್ತುತ ಜಾಗತಿಕವಾಗಿ ಶೇ.55 ಮಂದಿ ನಗರವಾಸಿಗಳಿದ್ದಾರೆ. 

loader