ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಪೊಲೀಸರು ಮತ್ತೊಂದು ಸಮನ್ಸ್ ಜಾರಿಮಾಡಿದ್ದಾರೆ. ಪಕ್ಷದ ಚಿಹ್ನೆಗಾಗಿ ಲಂಚ ನೀಡಿದ ಆರೋಪ ಪ್ರಕರಣ ವಿಚಾರವಾಗಿ ಏಪ್ರಿಲ್​ 22ರಂದು  ದೆಹಲಿಯ ಅಂತರ್ ರಾಜ್ಯ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್`ನಲ್ಲಿ ಸೂಚಿಸಲಾಗಿದೆ.

ಚೆನ್ನೈ(ಎ.20): ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಪೊಲೀಸರು ಮತ್ತೊಂದು ಸಮನ್ಸ್ ಜಾರಿಮಾಡಿದ್ದಾರೆ. ಪಕ್ಷದ ಚಿಹ್ನೆಗಾಗಿ ಲಂಚ ನೀಡಿದ ಆರೋಪ ಪ್ರಕರಣ ವಿಚಾರವಾಗಿ ಏಪ್ರಿಲ್​ 22ರಂದು ದೆಹಲಿಯ ಅಂತರ್ ರಾಜ್ಯ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್`ನಲ್ಲಿ ಸೂಚಿಸಲಾಗಿದೆ.

ಪನ್ನೀರ್ ಸೆಲ್ವಂ ಮತ್ತು ಪಳನಿ ಸ್ವಾಮಿ ಬಣಗಳ ವೀಲಿನಕ್ಕಾಗಿ ಪಕ್ಷದ ಹಿತದೃಷ್ಟಿಯಿಂದ ದಿನಕರನ್ ಮತ್ತು ಶಶಿಕಲಾ ಪಕ್ಷದ ಕಾರ್ಯಚಟುವಟಿಕೆಯಿಂದ ಹೊರಗುಳಿಯುವುದಾಗಿ ಘೊಷಿಸಿದ ಕೆಲ ಗಂಟೆಗಳಲ್ಲೇ ಮಧ್ಯರಾತ್ರಿ 1 ಗಂಟೆಗೆ ವಿಚಾರಣೆ ನಡೆಸಿ ದಿನಕರನ್`ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಪಕ್ಷದ ಚಟುವಟಿಕೆಯಿಂದ ಹೊರಗುಳಿಯುವ ಘೋಷಣೆಗೂ ಮುನ್ನ ಪಕ್ಷದ ಶಾಸಕರು ಮತ್ತು ಜಿಲ್ಲಾ ಕಾರ್ಯದರ್ಶಿಗಳ ಸಭೆ ಕರೆದು ಬಲಪ್ರದರ್ಶನಕ್ಕೆ ದಿನಕರನ್ ಮುಂದಾಗಿದ್ದರು.

ಆದರೆ, ಆ ಪ್ರಯತ್ನ ಫಲ ನೀಡಲಿಲ್ಲ. ಹೀಗಾಗಿ, ದಿನಕರನ್ ಉಲ್ಟಾ ಹೊಡೆದಿದ್ದಾರೆ. ಆರ್.ಕೆ. ನಗರ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ಆರೋಪ,ಐಟಿ ದಾಳಿ ವೇಳೆ ಸಿಕ್ಕ ದಾಖಲೆಗಳಿಂದಾಗಿ ಪಕ್ಷದಲ್ಲಿ ದಿನಕರನ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು.