Asianet Suvarna News Asianet Suvarna News

ಮೋದಿ ಕೊಲ್ಲುವ ದಿನ, ವೇಳೆ ಗೊತ್ತಾಯ್ತು?: ಇ-ಮೇಲ್‌ನಲ್ಲಿ ಇನ್ನೇನಿತ್ತು?

ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ಬಹಿರಂಗ! ದೆಹಲಿ ಪೊಲೀಸರಿಗೆ ಇ-ಮೇಲ್ ಸಂದೇಶ ರವಾನೆ! ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹತ್ಯೆಗೆ ಸಂಚು! ದಾಳಿಯ ದಿನ, ವೇಳೆ ನಮೂದಿಸಿದ ದುಷ್ಕರ್ಮಿಗಳು! ಅಸ್ಸಾಂ ಜೈಲಿಂದ ಸಂದೇಶ ರವಾನೆಯಾದ ಅನುಮಾನ
 

Delhi Police chief receives e-mail threat to kill PM Modi
Author
Bengaluru, First Published Oct 13, 2018, 2:48 PM IST
  • Facebook
  • Twitter
  • Whatsapp

ನವದೆಹಲಿ(ಅ.13): ಮುಂಬರುವ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು, ದೆಹಲಿ ಪೊಲೀಸರಿಗೆ ಇ-ಮೇಲ್ ಸಂದೇಶ ರವಾನೆಯಾಗಿದೆ.

ಈ ಸಂಬಂಧ ದೆಹಲಿ ಪೊಲೀಸ್​ ಕಮಿಷನರ್ ಗೆ ಇ-ಮೇಲ್​ನಲ್ಲಿ ಬೆದರಿಕೆ ಒಡ್ಡಿರುವ ದುಷ್ಕರ್ಮಿಗಳು, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುತ್ತೇವೆ ಎಂದು ಒಂದು ಸಾಲಿನಲ್ಲಿ ತಿಳಿಸಿದ್ದಾರೆ. ಹಾಗೇ ಮೇಲ್​ನಲ್ಲಿ ಹತ್ಯೆ ಮಾಡುವ ದಿನಾಂಕ ಮತ್ತು ವೇಳೆಯನ್ನು ಕೂಡ ನಮೂದಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಸ್ಸಾಂ ಜೈಲಿನಿಂದ ಈ  ಇ-ಮೇಲ್ ರವಾನೆಯಾಗಿದೆ ಎಂದು ಶಂಕಿಸಲಾಗಿದ್ದು, ಪ್ರಧಾನಿ ಮೋದಿ ಅವರಿಗೆ ಹೆಚ್ಚಿನ ಭದ್ರತೆ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೇ ಈ ಕುರಿತು ತನಿಖೆ ಕೈಗೆತ್ತಿಕೊಂಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios