ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ನಿನ್ನೆ ರಾಜಿನಾಮೆ ನೀಡಿರುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಾಜೀಬ್ ಜಂಗ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ.
ನವದೆಹಲಿ (ಡಿ. 23): ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ನಿನ್ನೆ ರಾಜಿನಾಮೆ ನೀಡಿರುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಾಜೀಬ್ ಜಂಗ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ.
ನಾಜೀಬ್ ಜಂಗ್ ರಾಜಿನಾಮೆಗೆ ನರೇಂದ್ರ ಮೋದಿಯೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಜಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಇದಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿ ಜಂಗ್ ರವರನ್ನು ತಿಂಡಿಗೆ ಆಹ್ವಾನಿಸಿದ್ದರು. ವೈಯಕ್ತಿಕ ಕಾರಣಗಳಿಗಾಗಿ ರಾಜಿನಾಮೆ ನೀಡಿದ್ದಾರೆ ಎಂದು ಕೇಜ್ರಿ ಹೇಳಿದ್ದಾರೆ. ಅದೇ ರೀತಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭೇಟಿ ಮಾಡಿ, ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ರಾಜಿನಾಮೆ ನೀಡಿರುವುದಾಗಿ ಜಂಗ್ ಹೇಳಿದ್ದಾರೆಂದು ಸಿಸೋಡಿಯಾ ಹೇಳಿದ್ದಾರೆ.
ಮುಂದಿನ ಲೆಫ್ಟಿನೆಂಟ್ ಗವರ್ನರ್ ಆಗಲು ಸಾಕಷ್ಟು ಹೆಸರುಗಳು ಕೇಳಿ ಬರುತ್ತಿದೆ. ಆದರೆ ಅಧಿಕೃತವಾಗಿ ಹೆಸರು ಬಂದಿಲ್ಲವೆಂದು ಸಿಸೋಡಿಯಾ ಹೇಳಿದ್ದಾರೆ.
