ವರನ ಭುಜಕ್ಕೆ ಗುಂಡು ಹೊಕ್ಕಿದ್ದರೂ ಮದುವೆ ಮನೆಗೆ ಬಂದು ವಧುವಿಗೆ ತಾಳಿ ಕಟ್ಟಿದ್ದಾನೆ. ಏನಿದು ಸ್ಟೋರಿ? ಇಲ್ಲಿದೆ ನೋಡಿ 

ನವದೆಹಲಿ, [ನ.22]: ಮದುವೆ ಆಗಲು ಗಂಡೆದೆ ಬೇಕು ಎನ್ನುತ್ತಾರೆ. ಆದರೆ, ದೆಹಲಿಯ ವರನೊಬ್ಬ ಭುಜಕ್ಕೆ ಗುಂಡು ಹೊಕ್ಕಿದ್ದರೂ ಮದುವೆ ಮಂಟಪಕ್ಕೆ ಬಂದು ತಾಳಿ ಕಟ್ಟಿದ್ದಾನೆ. 

ಮದುವೆಯ ಸಂಭ್ರಮದಲ್ಲಿದ್ದ ವರನ ಮೇಲೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಸೋಮವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದರು.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. 

ಆದರೆ, ಭುಜ ಭಾಗದಲ್ಲಿ ಹೊಕ್ಕಿರುವ ಗುಂಡು ತೆಗೆಯಲು ಸಾಧ್ಯವಾಗಿಲಿಲ್ಲ. ಆದರೂ ವರ ಅದೇ ಸ್ಥಿತಿಯಲ್ಲಿ ವಧುಗೆ ತಾಳಿಕಟ್ಟಿ ಮದುವೆ ಆಗಿದ್ದಾನೆ. ಗುಂಡು ಹಾರಿಸಿರುವುದಕ್ಕೆ ಕಾರಣ ಗೊತ್ತಾಗಿಲ್ಲ.