ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎರಚಿದ ಆಗುಂತಕ! ದೆಹಲಿಯ ಸೆಕ್ರೇಟ್ರಿಯೇಟ್ ಕಚೇರಿ ಬಳಿ ಕೇಜ್ರಿವಾಲ್ ಮೇಲೆ ದಾಳಿ! ಕೇಜ್ರಿ ಮುಖಕ್ಕೆ ಖಾರದ ಪುಡಿ ಎರಚಿದ ಆರೋಪಿ ಅನಿಲ್ ಶರ್ಮಾ! ಆರೋಪಿ ಅನಿಲ್ ಶರ್ಮಾನನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು! ಸಿಎಂ ಅರವಿಂದ್ ಕೇಜ್ರಿವಾಲ್ ಮೇಲೆ ನಡೆದ ಮೂರನೇ ದಾಳಿ
ನವದೆಹಲಿ(ನ.20): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಸೆಕ್ರೇಟ್ರಿಯೇಟ್ ಕಚೇರಿ ಬಳಿ ಈ ಘಟನೆ ನಡೆದಿದ್ದು, ಆರೋಪಿ ಅನಿಲ್ ಶರ್ಮಾ ಎಂಬ ವ್ಯಕ್ತಿಯನ್ನು ಐಪಿ ಎಸ್ಟೇಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಆರೋಪಿ ಯಾವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಈತ ರಾಜಕೀಯ ದುರುದ್ದೇಶದಿಂದ ದಾಳಿ ನಡೆಸಿದ್ದಾನೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಸೆಕ್ರೇಟ್ರಿಯೇಟ್ ಕಚೇರಿಯ ಲಿಫ್ಟ್ ಬಳಿ ಇದ್ದ ಸೋಫಾದಲ್ಲಿ ಕುಳಿತಿದ್ದ ಅನಿಲ್ ಇದ್ದಕ್ಕಿದ್ದಂತೆ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎರಚಿದ್ದಾನೆ. ತಕ್ಷಣವೇ ಪೊಲೀಸರು ಅನಿಲ್ನನ್ನು ವಶಕ್ಕೆ ಪಡೆದಿದ್ದಾರೆ.

ಕೇಜ್ರಿವಾಲ್ ಅವರ ಮೇಲೆ ಮೂರು ಬಾರಿ ಇದೇ ರೀತಿ ದಾಳಿ ನಡೆದಿತ್ತು. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ ಕೇಜ್ರಿವಾಲ್ ಅವರ ಮುಖಕ್ಕೆ ಮಸಿ ಬಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.
