ರಕ್ಷಣಾ ಸಚಿವಾಲಯದ ವೆಬ್'ಸೈಟ್ ಹ್ಯಾಕ್

Defence ministry website hacked displays Chinese character
Highlights

ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ' ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆ ಮುಂದೆ ಈ ರೀತಿ ಉಂಟಾಗದಂತೆ  ಮುನ್ಬೆಚ್ಚರಿಕೆ ವಹಿಸಲಾಗುವುದು' ಎಂದು ತಿಳಿಸಿದ್ದಾರೆ.

ನವದೆಹಲಿ(ಏ.06): ರಕ್ಷಣಾ ಸಚಿವಾಲದ ವೆಬ್'ಸೈಟ್ ಇಂದು ಸಂಜೆ ಹ್ಯಾಕ್ ಹಾಗಿದ್ದು ಚೀನಿ ಅಕ್ಷರಗಳು ವೆಬ್'ಸೈಟ್'ನಲ್ಲಿ ಕಾಣಿಸಿಕೊಂಡಿವೆ.

ಹ್ಯಾಕ್ ಆದ ಒಂದು ಗಂಟೆಯ ನಂತರ 'ರಾಷ್ಟ್ರೀಯ ದತ್ತಾಂಶ ಕೇಂದ್ರ'(ಎನ್'ಐಸಿ) ಹ್ಯಾಕ್'ಅನ್ನು ನಿರಾಕರಿಸಿದ್ದು ತಾಂತ್ರಿಕ ದೋಷದಿಂದ ಈ ರೀತಿ ಉಂಟಾಗಿದೆ ಎಂದು ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ' ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆ ಮುಂದೆ ಈ ರೀತಿ ಉಂಟಾಗದಂತೆ  ಮುನ್ಬೆಚ್ಚರಿಕೆ ವಹಿಸಲಾಗುವುದು' ಎಂದು ತಿಳಿಸಿದ್ದಾರೆ.

ಸಚಿವಾಲದ ಸಿಬ್ಬಂದಿ ಇಂದು ಮಧ್ಯಾಹ್ನದ ನಂತರ ವೆಬ್'ಸೈಟ್ ಆರಂಭಿಸಿದಾಗ ಎರರ್ ಸಂದೇಶ ಬರುತ್ತಿದ್ದು, ಮತ್ತೆ ಮತ್ತೆ ಪ್ರಯತ್ನಿಸಿದಾಗ ಚೀನಿ ಅಕ್ಷರಗಳು ಕಾಣಿಸಿಕೊಂಡವು. ಆದರೆ ಚೀನಿ ಹ್ಯಾಕರ್'ಗಳಿಂದ ಹ್ಯಾಕ್ ಆಗಿದೆ ಎಂದು ಕೆಲವು ವರದಿಗಳು ತಿಳಿಸಿವೆ.

loader