Asianet Suvarna News Asianet Suvarna News

‘ಮಗನ ಸಾವಿನ ಬಗ್ಗೆ ಏನನ್ನೋ ಮುಚ್ಚಿಡುವ ಪ್ರಯತ್ನ ’ ಯುದ್ಧವಿಮಾನ ಪೈಲಟ್ ತಂದೆಯಿಂದ ಮೋದಿಗೆ ಪತ್ರ

ವಾಯುಪಡೆಯ ಸುಕೊಯಿ ಯುದ್ಧವಿಮಾನ ಪತನಗೊಂಡು ಮೃತಪಟ್ಟ ಫ್ಲೈಟ್ ಲೆಫ್ಟಿನೆಂಟ್’ವೋರ್ವರ ತಂದೆ ತನ್ನ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಹಾಗೂ ವಾಯುಪಡೆ ಮುಖ್ಯಸ್ಥ ಬೀರೆಂದರ್ ಸಿಂಗ್ ಧನೋವಾ  ಅವರಿಗೆ ಪತ್ರ ಬರೆದಿರುವ ಮಾಜಿ ಇಸ್ರೋ ಉದ್ಯೋಗಿ ವಿ.ಪಿ. ಸಹದೇವನ್, ತನ್ನ ಮಗ ಫ್ಲೈಟ್ ಲೆಫ್ಟಿನೆಂಟ್ ಅಚು ದೇವ್ (26) ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

Deceased IAF pilots father cries foul play

ತಿರುವನಂತಪುರಂ (ಜು.05): ವಾಯುಪಡೆಯ ಸುಕೊಯಿ ಯುದ್ಧವಿಮಾನ ಪತನಗೊಂಡು ಮೃತಪಟ್ಟ ಫ್ಲೈಟ್ ಲೆಫ್ಟಿನೆಂಟ್’ವೋರ್ವರ ತಂದೆ ತನ್ನ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಹಾಗೂ ವಾಯುಪಡೆ ಮುಖ್ಯಸ್ಥ ಬೀರೆಂದರ್ ಸಿಂಗ್ ಧನೋವಾ  ಅವರಿಗೆ ಪತ್ರ ಬರೆದಿರುವ ಮಾಜಿ ಇಸ್ರೋ ಉದ್ಯೋಗಿ ವಿ.ಪಿ. ಸಹದೇವನ್, ತನ್ನ ಮಗ ಫ್ಲೈಟ್ ಲೆಫ್ಟಿನೆಂಟ್ ಅಚು ದೇವ್ (26) ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಘಟನೆಯ ಬಗ್ಗೆ ಉತ್ತರ ಸಿಗದ ಪ್ರಶ್ನೆಗಳು ಬಹಳ ಇವೆ. ನಮ್ಮಿಂದ ಏನನ್ನೋ ಅಡಗಿಸಲಾಗುತ್ತಿದೆ ಎಂದು ದುಖ:ತಪ್ತ ತಂದೆ ಹೇಳಿದ್ದಾರೆ. ವಾಯುಪಡೆಯು  ಈ ಬಗ್ಗೆ ತನಿಖೆಯನ್ನು ಆದೇಶಿಸಿದೆಯಾದರೂ, ಆ ಬಗ್ಗೆ ಸ್ವತಂತ್ರವಾದ ತನಿಖೆ ನಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಳೆದ ಮೇ.23ರಂದು ಭಾರತ-ಚೀನಾ ಗಡಿಯಲ್ಲಿ ವಾಯುಪಡೆಯ ಯುದ್ಧವಿಮಾನ ಸುಕೋಯಿ-30  ಪತನಗೊಂಡು ಅಚು ದೇವ್ ಹಾಗೂ ಸ್ಕ್ವಾಡ್ರನ್ ಲೀಡರ್  ಡಿ. ಪಂಕಜ್ ಎಂಬವರು ಮೃತಪಟ್ಟಿದ್ದರು. 3 ದಿನಗಳ ಶೋಧ ಕಾರ್ಯಾಚರಣೆ ಬಳಿಕ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಮೃತಪಟ್ಟ ಸಿಬ್ಬಂದಿಗಳ ಕಳೇಬರವನ್ನು ಅವರವರ ತಾಯ್ನಾಡಿಗೆ ಕಳುಹಿಸಲಾಗಿತ್ತು.

‘ಆದರೆ ಶವಪೆಟ್ಟಿಗೆಯಲ್ಲಿ ಮೃತದೇಹವಿರಲಿಲ್ಲ; ದೇಹವು ಸಂಪೂರ್ಣ ಸುಟ್ಟುಹೋಗಿದೆ ಎಂದು ನನಗೆ ಹೇಳಲಾಗಿತ್ತು. ಆದರೆ ಮಗನ ಸ್ವಲ್ಪ ಮಾತ್ರ ಸುಟ್ಟ ವ್ಯಾಲೆಟ್ ಸಿಕ್ಕಿತ್ತು, ಅದ್ಹೇಗೆ ಸಾಧ್ಯ’ ಎಂದು ಸಹದೆವನ್ ಪ್ರಶ್ನಿಸಿದ್ದಾರೆ. ವ್ಯಾಲೆಟೊಳಗಿದ್ದ ನೋಟುಗಳು ಹಾಗೂ ಬ್ಯಾಂಕ್ ಕಾರ್ಡ್’ಗಳು ಸುಸ್ಥಿತಿಯಲ್ಲೇ ಇವೆ, ಎಂದು ಸಹದೇವನ್ ಹಿಂದೂಸ್ತಾನ್ ಟೈಮ್ಸ್'ಗ ಹೇಳಿದ್ದಾರೆ.

ನನ್ನ ಮಗನ ಸಾವಿಗೆ ಯಾವುದೇ ವೈಜ್ಷಾನಿಕ ಅಥವಾ ಸಾಂದರ್ಭಿಕ ಪುರಾವೆಗಳಿಲ್ಲ. ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡಲಾಗುತ್ತಿದೆ. ಸ್ಪಷ್ಟ ಪುರಾವೆ ಸಿಗುವವರೆಗೂ ಮಗ ಸಾವನಪ್ಪಿದ್ದಾನೆಂದು ಒಪ್ಪಿಕೊಲ್ಳಲು ಸಾಧ್ಯವಿಲ್ಲ. ನಮಗಿನ್ನೂ ಆತ ಜೀವಂತವಾಗಿದ್ದಾನೆ. ಎಂದು ಅವರು ಹೇಳಿದ್ದಾರೆ.

ಕೇರಳ ಸಿಪಿಐ-ಎಂ ಕಾರ್ಯದರ್ಶಿ ಬಾಲಕೃಷ್ಣನ್ ಹಾಗೂ ವಿರೋಧ ಪಕ್ಷ ನಾಯಕ  ರಮೆಶ್ ಚೆನ್ನಿತಾಲ ಈ ವಿಷಯಕ್ಕೆ ಸಂಬಂಧಿಸಿ ರಕ್ಷಣಾ ಸಚಿವರು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ಧಾರೆ.

(ಸಾಂದರ್ಭಿಕ ಚಿತ್ರ)

 

Follow Us:
Download App:
  • android
  • ios