ಜೀವನದ ಅಂತ್ಯವನ್ನು ಮಾನವೀಯತೆ ಹಾಗೂ ಘನತೆಪೂರ್ಣವಾಗಿ ಮಾಡಬೇಕು ಎನ್ನುವ 10 ವರ್ಷಗಳಿಂದ ಕೇಳಿ ಬರುತ್ತಿರುವ ವಾದವನ್ನು ಸುಪ್ರೀಂಕೋರ್ಟ್ ಮತ್ತೆ ಮುನ್ನಲೆಗೆ ತಂದಿದೆ. ಗಲ್ಲುಶಿಕ್ಷೆಗೊಳಗಾದವರಿಗೆ ನೇಣಿಗೆ ಕುಣಿಕೆ ಹಾಕುವುದನ್ನು ನಿಷೇಧಿಸಿ ಬೇರೆ ರೀತಿಯಲ್ಲಿ ಯಾಕೆ ಮರಣ ದಂಡನೆ ನೀಡಬಾರದೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. 3 ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ನವದೆಹಲಿ (ಅ.06): ಜೀವನದ ಅಂತ್ಯವನ್ನು ಮಾನವೀಯತೆ ಹಾಗೂ ಘನತೆಪೂರ್ಣವಾಗಿ ಮಾಡಬೇಕು ಎನ್ನುವ 10 ವರ್ಷಗಳಿಂದ ಕೇಳಿ ಬರುತ್ತಿರುವ ವಾದವನ್ನು ಸುಪ್ರೀಂಕೋರ್ಟ್ ಮತ್ತೆ ಮುನ್ನಲೆಗೆ ತಂದಿದೆ. ಗಲ್ಲುಶಿಕ್ಷೆಗೊಳಗಾದವರಿಗೆ ನೇಣಿಗೆ ಕುಣಿಕೆ ಹಾಕುವುದನ್ನು ನಿಷೇಧಿಸಿ ಬೇರೆ ರೀತಿಯಲ್ಲಿ ಯಾಕೆ ಮರಣ ದಂಡನೆ ನೀಡಬಾರದೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. 3 ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಗಲ್ಲುಶಿಕ್ಷೆಯನ್ನು ಇನ್ನಷ್ಟು ಘನತೆಪೂರ್ಣವಾಗಿ ಮಾಡಬೇಕು. ಕತ್ತಿಗೆ ಕುಣಿಕೆ ಹಾಕುವುದು ಸರಿಯಲ್ಲ ಎಂದು ಪಿಐಎಲ್ ಸಲ್ಲಿಸಲಾಗಿತ್ತು. ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿತು. ಗಲ್ಲುಶಿಕ್ಷೆಗೆ ಒಳಗಾದವರನ್ನು ಬೇರೆ ಯಾವುದಾದರೂ ಮಾರ್ಗದಲ್ಲಿ ಮರಣದಂಡನೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಅಪರಾಧಿಗಳನ್ನು ನೋವಿನಿಂದ ಸಾಯಿಸುವ ಬದಲು ಶಾಂತಿಯುತವಾಗಿ ಸಾಯುವಂತೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಮರಣದಂಡನೆಗೆ ಒಳಗಾದವರಿಗೆ ಸಾಮಾನ್ಯವಾಗಿ ಕತ್ತಿಗೆ ನೇಣು ಹಾಕಿ ಸಾಯಿಸುವ ಪದ್ಧತಿ 60 ದೇಶಗಳಲ್ಲಿ ಇದೆ. ಇನ್ನು ಕೆಲವೆಡೆ ಇಂಜೆಕ್ಷನ್, ಗುಂಡು ಹಾರಿಸುವುದು, ವಿದ್ಯುತ್ ನೀಡಿ ಹಾಗೂ ಬೇರೆ ವಿಧಾನಗಳಲ್ಲೂ ಸಾಯಿಸಲಾಗುತ್ತದೆ.