ತಮಾಷೆ ಮಾಡಲು ಹೋಗಿ ಗೋಕಾಕ್ ಜಲಪಾತದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಯುವಕನ ಮೃತ  35 ಗಂಟೆ ಕಳೆದರೂ ಪತ್ತೆಯಾಗಿಲ್ಲ. ಸಿಬ್ಬಂದಿಗಳು  ಎರಡನೆಯ ದಿನದ ಕಾರ್ಯಾಚರಣೆ ನಡೆಸುತ್ತಿದ್ದಾರೆ.  ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯ ಈಜು ಪರಿಣಿತರು  ಶೋಧ ಕಾರ್ಯ ಮುಂದುವರೆಸಿದ್ದಾರೆ.  

ಬೆಳಗಾವಿ (ಜೂ. 18): ತಮಾಷೆ ಮಾಡಲು ಹೋಗಿ ಗೋಕಾಕ್ ಜಲಪಾತದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಯುವಕನ ಮೃತ 35 ಗಂಟೆ ಕಳೆದರೂ ಪತ್ತೆಯಾಗಿಲ್ಲ. ಸಿಬ್ಬಂದಿಗಳು ಎರಡನೆಯ ದಿನದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯ ಈಜು ಪರಿಣಿತರು ಶೋಧ ಕಾರ್ಯ ಮುಂದುವರೆಸಿದ್ದಾರೆ. 

ಗೋಕಾಕ ಜಲಪಾತ ಅಂದಾಜು 200 ಅಡಿ ಆಳವಿದೆ. ಆಳದಲ್ಲಿ ಕಲ್ಲಿನ ಸಂದಿಯಲ್ಲಿ ಶವ ಸಿಲುಕಿರುವ ಶಂಕೆಯಿದೆ. 

ರಂಜಾನ್ ಖಾಜಿ ಎಂಬ ಯುವಕ ಜೂ. 16 ರಂದು ಜಲಪಾತದಲ್ಲಿ ಬಿದ್ದಿದ್ದ. ಯುವಕ ಜಲಪಾತಕ್ಕೆ ಬೀಳುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿತ್ತು.