ನಮ್ಮ ರಾಜ್ಯದೊಳಗೆ ತಮಿಳುನಾಡಿನ ಕಾವೇರಿಪಟ್ಟಣಂನಿಂದ ಕಿಲ್ಲರ್ ಖೋವಾ ಸ್ಮಗ್ಲಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ನಮ್ಮ ಸುವರ್ಣನ್ಯೂಸ್ ಕವರ್ಸ್ಟೋರಿ ತಂಡ ತಮಿಳುನಾಡಿನ ಕಾವೇರಿಪಟ್ಟಣಂಗೆ ತೆರಳಿ, ಅಲ್ಲಿನ ಖೋವಾ ಫ್ಯಾಕ್ಟರಿಯೊಳಗೆ ರಹಸ್ಯ ಕಾರ್ಯಾಚರಣೆ ನಡೆಸಿದೆ.
ಬೆಂಗಳೂರು(ಸೆ.23): ನಮ್ಮ ರಾಜ್ಯದೊಳಗೆ ತಮಿಳುನಾಡಿನ ಕಾವೇರಿಪಟ್ಟಣಂನಿಂದ ಕಿಲ್ಲರ್ ಖೋವಾ ಸ್ಮಗ್ಲಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ನಮ್ಮ ಸುವರ್ಣನ್ಯೂಸ್ ಕವರ್ಸ್ಟೋರಿ ತಂಡ ತಮಿಳುನಾಡಿನ ಕಾವೇರಿಪಟ್ಟಣಂಗೆ ತೆರಳಿ, ಅಲ್ಲಿನ ಖೋವಾ ಫ್ಯಾಕ್ಟರಿಯೊಳಗೆ ರಹಸ್ಯ ಕಾರ್ಯಾಚರಣೆ ನಡೆಸಿದೆ.
ಫ್ರೆಶ್ ಹಾಲನ್ನ ಕುದಿಸಿ ತಯಾರಿಸಬೇಕಾದ ಖೋವಾವನ್ನ ಇಲ್ಲಿನ ಕೆಲ ಫ್ಯಾಕ್ಟರಿಗಳು ಹಾಳಾದ, ದಿನಾಂಕ ಕಳೆದಿರೋ ಹಾಲಿನ ಪೌಡರಿಂದ ತಯಾರಿಸ್ತಿದ್ದಾರೆ. ಈ ಸೀಕ್ರೆಟನ್ನ ಸ್ವತಃ ಫ್ಯಾಕ್ಟರಿ ಸಿಬ್ಬಂದಿಯೇ ಬಾಯ್ಬಿಟ್ಟಿದ್ದಾರೆ. ಇನ್ನು ಖೋವಾಗೆ ಸೋಡಾಪುಡಿ, ಅಜಿನಮೋಟ, ಮಿತಿಮೀರಿ ಸಕ್ಕರೆ ಡೆಡ್ಲಿ ಕಲರ್ ಸೇರಿದಂತೆ ಇನ್ನೂ ಅನೇಕ ಡೆಡ್ಲಿ ರಾಸಾಯನಿಕಗಳನ್ನ ಬಳಸುತ್ತಾರೆ. ಇಂಥಾ ಕಿಲ್ಲರ್ ಖೋವಾ, ಕಲಾಕಂದ್, ಬರ್ಫಿ ಸರಬರಾಜಾಗೋದು ನಮ್ಮ ರಾಜ್ಯ ಹಾಗೂ, ಮುಖ್ಯವಾಗಿ ನಮ್ಮ ರಾಜಧಾನಿ ಬೆಂಗಳೂರಿಗೆ ಅನ್ನೋ ಶಾಕಿಂಗ್ ನ್ಯೂಸ್ ಬಯಲಾಗಿದೆ.
ಇದನ್ನ ತಡೆಯಲು ನಮ್ಮ ಕವರ್ಸ್ಟೋರಿ ತಂಡ, ಕಾವೇರಿಪಟ್ಟಣಂನಿಂದ ಸ್ಮಗ್ಲಿಂಗ್ ಮಾಡುತ್ತಿದ್ದ ಲಾರಿಗಳನ್ನ ನಡುರಾತ್ರಿಯಲ್ಲಿ ಚೇಸ್ ಮಾಡಿ ಆಹಾರ ಸುರಕ್ಷತಾ ಇಲಾಖೆ ಜಂಟಿ ನಿರ್ದೇಶಕ ಡಾ.ಹರ್ಷವರ್ಧನ್ ನೇತೃತ್ವದ ತಂಡಕ್ಕೆ ಒಪ್ಪಿಸಿ, ಟನ್ಗಟ್ಟಲೆ ಕೆಮಿಕಲ್ ಖೋವಾ ತುಂಬಿದ ಲಾರಿಗಳನ್ನ ಸೀಜ್ ಮಾಡಿಸಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಡಿದೆ.
