ಪ್ಯಾನ್ ಕಾರ್ಡ್ ಹೊಂದಿಲ್ಲದವರು ಅರ್ಜಿ ಸಂ.60ಯನ್ನು ಭರ್ತಿ ಮಾಡಿ ಕೊಡಬೇಕಾಗಿದೆ.  ಹೊಸ ನಿಯಮಗಳು ಜನ್ ಧನ್ ಖಾತೆಗಳು ಹಾಗೂ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಗಳಿಗೆ ಅನ್ವಯವಾಗುವುದಿಲ್ಲ.

ನವದೆಹಲಿ (ಫೆ.28): ಬ್ಯಾಂಕ್’’ನಲ್ಲಿ ಖಾತೆ ಹೊಂದಿದವರು ಪ್ಯಾನ್ ಕಾರ್ಡ್ ಸಂಖ್ಯೆ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಆದಾಯ ತೆರಿಗೆ ನಿಯಮಗಳಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಇತ್ತೀಚೆಗೆ ಕೆಲವು ತಿದ್ದುಪಡಿಗಳನ್ನು ಮಾಡಿದ್ದು, ಆ ಪ್ರಕಾರ ಖಾತೆದಾರರು ಫೆ.28ರೊಳಗೆ ತಮ್ಮ ಪ್ಯಾನ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.

ಪ್ಯಾನ್ ಕಾರ್ಡ್ ಹೊಂದಿಲ್ಲದವರು ಅರ್ಜಿ ಸಂ.60ಯನ್ನು ಭರ್ತಿ ಮಾಡಿ ಕೊಡಬೇಕಾಗಿದೆ. ಹೊಸ ನಿಯಮಗಳು ಜನ್ ಧನ್ ಖಾತೆಗಳು ಹಾಗೂ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಗಳಿಗೆ ಅನ್ವಯವಾಗುವುದಿಲ್ಲ.

ಅರ್ಜಿ ಸಂ. 60ನ್ನು ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿಯೂ ಲಭ್ಯವಿರುವುದು, ಹಾಗೂ ಅವುಗಳ ವೆಬ್’ಸೈಟ್’ಗಳಿಂದಲೂ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಏನದು ಅರ್ಜಿ ಸಂ. 60?

ವ್ಯಕ್ತಿಯು ತಾನು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಆತ/ಆಕೆಯು ಸ್ವ-ದೃಢೀಕರಿಸಬೇಕು. ಅದನ್ನು ಭರ್ತಿ ಮಾಡಿಕೊಡುವ ಅರ್ಜಿಯನ್ನೇ ಫಾರ್ಮ್ ಸಂ. 60 ಎಂದು ಹೇಳಲಾಗುತ್ತದೆ.