ಮಾರ್ಚ್’ವರೆಗೆ ಕಂಪೆನಿಗಳು ತಮ್ಮ ಮಾರಾಟವಾಗದ ಸರಕುಗಳಿಗೆ ಜಿಎಸ್‌ಟಿ ನಂತರದ ಎಂಆರ್‌ಪಿ ಪ್ರದರ್ಶಿಸುವುದಕ್ಕಾಗಿ ಎಂಆರ್‌ಪಿ ಸ್ಟಿಕ್ಕರ್ ಅಂಟಿಸಲು ಅನುಮತಿಯಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ಪಾಸ್ವಾನ್ ಹೇಳಿದ್ದಾರೆ.

ನವದೆಹಲಿ: ಮಾರ್ಚ್’ವರೆಗೆ ಕಂಪೆನಿಗಳು ತಮ್ಮ ಮಾರಾಟವಾಗದ ಸರಕುಗಳಿಗೆ ಜಿಎಸ್‌ಟಿ ನಂತರದ ಎಂಆರ್‌ಪಿ ಪ್ರದರ್ಶಿಸುವುದಕ್ಕಾಗಿ ಎಂಆರ್‌ಪಿ ಸ್ಟಿಕ್ಕರ್ ಅಂಟಿಸಲು ಅನುಮತಿಯಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ಪಾಸ್ವಾನ್ ಹೇಳಿದ್ದಾರೆ.

ಜು.1ರಂದು ಜಿಎಸ್‌ಟಿ ಆರಂಭವಾಗುವಾಗ, ಮಾರಾಟವಾಗದ ಸರಕು ಗಳ ಪ್ಯಾಕ್‌ಗಳ ಮೇಲೆ ಸೆ. ಮತ್ತು ಡಿಸೆಂಬರ್ ವರೆಗೆ ಮಾತ್ರ ಎಂಆರ್‌ಪಿ ಸ್ಟಿಕ್ಕರ್ ಅಂಟಿಸಲು ಅವಕಾಶ ನೀಡಲಾಗಿತ್ತು.

ಕಳೆದ ಜಿಎಸ್‌ಟಿ ಸಭೆಯಲ್ಲಿ 200 ಸರಕುಗಳ ಜಿಎಸ್‌ಟಿ ದರ ಕಡಿಮೆ ಮಾಡಲಾಗಿದೆ. ಹೀಗಾಗಿ 2018 ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ ಎಂದಿದ್ದಾರೆ ಪಾಸ್ವಾನ್.