ತೆರಿಗೆದಾರು ತಮ್ಮ ಪ್ಯಾನ್ ಕಾರ್ಡನ್ನು ಆಧಾರ್ ಸಂಖ್ಯೆ ಜತೆ ಸಂಯೋಜನೆ ಮಾಡಲು ನೀಡಲಾಗಿರುವ ಗಡುವು ಆ.31ಕ್ಕೆ ಕೊನೆಗೊಳ್ಳಲಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಹೇಳಿದೆ.

ನವದೆಹಲಿ: ತೆರಿಗೆದಾರು ತಮ್ಮ ಪ್ಯಾನ್ ಕಾರ್ಡನ್ನು ಆಧಾರ್ ಸಂಖ್ಯೆ ಜತೆ ಸಂಯೋಜನೆ ಮಾಡಲು ನೀಡಲಾಗಿರುವ ಗಡುವು ಆ.31ಕ್ಕೆ ಕೊನೆಗೊಳ್ಳಲಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಹೇಳಿದೆ.

ಸುಪ್ರೀಂ ಕೋರ್ಟ್ ಖಾಸಗಿತನದ ಹಕ್ಕು ವಿಚಾರವಾಗಿ ಗುರುವಾರ ನೀಡಿರುವ ತೀರ್ಪು ಪ್ಯಾನ್- ಆಧಾರ್ ಸಂಯೋಜನೆಗೆ ಅನ್ವಯವಾಗುವುದಿಲ್ಲ, ಆದುದರಿಂದ ಈ ಹಿಂದೆ ನೀಡಲಾಗಿರುವ ಗಡುವು (ಆ.31) ಹಾಗೇಯೇ ಇರಲಿದೆ ಎಂದು ಪ್ರಾಧಿಕಾರದ ಸಿಇಓ ಅಜಯ್ ಭೂಷಣೆ ಹೇಳಿದ್ದಾರೆ.

ಜತೆಗೆ, ಇತರ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಉಲ್ಲೇಖಿಸುವುದು ಕೂಡಾ ಎಂದಿನಂತೆ ಮುಂದುವರಿಯಲಿದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ಪ್ಯಾನ್ ಕಾರ್ಡ್’ನ್ನು ಕಡ್ಡಾಯವಾಗಿ ಆಧಾರ್ ಜತೆ ಲಿಂಕ್ ಮಾಡಬೇಕು ಎಂದು ಸರ್ಕಾರವು ತೆರಿಗೆದಾರರಿಗೆ ಸೂಚಿಸಿದೆ.