ಶಿವರಾಮ ಕಾರಂತ್ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಇಂದು ನಿರ್ಣಾಯಕ ದಿನ. ತನ್ನ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿರುವ ರಿಟ್ ಅರ್ಜಿಯ ಮಧ್ಯಂತರ ಆದೇಶ ಇಂದು ಹೊರಬೀಳಲಿದೆ.
ಬೆಂಗಳೂರು(ಸೆ.22): ಶಿವರಾಮ ಕಾರಂತ್ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಇಂದು ನಿರ್ಣಾಯಕ ದಿನ. ತನ್ನ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿರುವ ರಿಟ್ ಅರ್ಜಿಯ ಮಧ್ಯಂತರ ಆದೇಶ ಇಂದು ಹೊರಬೀಳಲಿದೆ.
257 ಎಕರೆ ಭೂಮಿಯನ್ನ ಡಿನೋಟಿಫಿಕೇಷನ್ ಆರೋಪ ಎದುರಿಸುತ್ತಿದ್ದು, ಬಿಎಸ್ವೈ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂದು ಎಸಿಬಿ ಹೈಕೋರ್ಟ್ನಲ್ಲಿ ವಾದಿಸಿದೆ. ಆದರೆ, ಯಡಿಯೂರಪ್ಪ ಪರ ವಕೀಲರು ಬಿಎಸ್ವೈ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ. ಸತತ ಎರಡು ವಾರಗಳ ಕಾಲ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಇಂದು ಮಧ್ಯಂತರ ಅರ್ಜಿಯ ಆದೇಶ ಪ್ರಕಟಿಸಲಿದೆ.
ಈ ಮಧ್ಯೆ ಎಸಿಬಿ ಅಧಿಕಾರಿಗಳು ತಡರಾತ್ರಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ್ದಾರೆ. ತೀರ್ಪು ಪರವಾಗಿ ಬಂದ್ರೆ ಕೂಡಲೇ ನೋಟಿಸ್ ಜಾರಿ ಮಾಡಿ ವಿಚಾರಣೆ ಗೆ ಹಾಜರಾಗುವಂತೆ ಸೂಚಿಸಬೇಕೆ ಬೇಡ ವಿಚಾರ, ಒಂದು ವೇಳೆ ವಿರುದ್ದವಾಗಿ ಬಂದ್ರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಚಿಂತನೆ ಬಗ್ಗೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳ ಬಳಿ ಚರ್ಚೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
