ಸೇನಾಧಿಕಾರಿಗಳೊಂದಿಗೆ ಸಂಪರ್ಕಿಸಿ ಪಾರ್ಥಿವ ಶರೀರ ತರಿಸಿಕೊಡುವಂತೆ ಸಂದೀಪ್ ಸೋದರಿ ಸುಮ, ಎಸ್ಪಿ ಬಳಿ ಮನವಿ ಮಾಡಿಕೊಂಡರು. ಮನವಿಗೆ ಒಪ್ಪಿದ ಎಸ್.ಪಿ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹಾಸನ (ಜ.29): ಜಮ್ಮು ಕಾಶ್ಮೀರದ ಹಿಮಪಾತದಲ್ಲಿ ಹುತಾತ್ಮರಾದ ವೀರ ಕನ್ನಡಿಗ ಯೋಧ ಸಂದೀಪ್ ಮನೆಗೆ, ಕೊನೆಗೂ ಹಾಸನ ಜಿಲ್ಲಾಧಿಕಾರಿ ಮತ್ತು ಎಸ್.ಪಿ ಭೇಟಿ ನೀಡಿದ್ದಾರೆ.
ಜಿಲ್ಲಾಧಿಕಾರಿ ವಿ.ಚೈತ್ರಾ ಎರಡು ದಿನಗಳಿಂದ ಊಟ ಬಿಟ್ಟಿದ್ದ ಸಂದೀಪ್ ತಾಯಿಗೆ, ಊಟ ಮಾಡಿಸಿ ಸಾಂತ್ವನ ಹೇಳಿದರು.
ಡಿ.ಸಿ. ಬಳಿ ಕಣ್ಣೀರು ಹಾಕಿ ಕಷ್ಟ ಹೇಳಿಕೊಂಡ ತಾಯಿ ಗಂಗಮ್ಮರಿಗೆ, ಸರ್ಕಾರದಿಂದ ಎಲ್ಲಾ ನೆರವು ನೀಡುವುದಾಗಿ ಡಿಸಿ ಚೈತ್ರಾ ಭರವಸೆ ನೀಡಿದರು.
ಸಂದೀಪ್ ತಂದೆ ಪುಟ್ಟರಾಜು, ತಾಯಿ ಗಂಗಮ್ಮ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಸೇನಾಧಿಕಾರಿಗಳೊಂದಿಗೆ ಸಂಪರ್ಕಿಸಿ ಪಾರ್ಥಿವ ಶರೀರ ತರಿಸಿಕೊಡುವಂತೆ ಸಂದೀಪ್ ಸೋದರಿ ಸುಮ, ಎಸ್ಪಿ ಬಳಿ ಮನವಿ ಮಾಡಿಕೊಂಡರು. ಮನವಿಗೆ ಒಪ್ಪಿದ ಎಸ್.ಪಿ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
