ಮಕ್ಕಳನ್ನು ನೋಡಿಕೊಳ್ಳಬೇಕಿದ್ದ ಸಹಾಯಕಿಯೊಬ್ಬಳು 10 ತಿಂಗಳ ಹೆಣ್ಣು ಮಗುವೊಂದನ್ನು ಮಾತು ಕೇಳದ ಕಾರಣಕ್ಕೆ ಎತ್ತಿ ಎಸೆಯುವುದರೊಂದಿಗೆ ಮನ ಬಂದಂತೆ ಥಳಿಸಿದ್ದಾಳೆ. 

ಮುಂಬೈ(ನ.25): ಮುಂಬೈನ ಡೇ ಕೇರ್ ನಲ್ಲಿ ಅವಳಡಿಸಿದ್ದ ಸಿಸಿಟಿವಿ ಕ್ಯಾಮೆರದಲ್ಲಿ ಶಾಕಿಂಗ್ ದೃಶ್ಯವೊಂದು ಸೆರೆಯಾಗಿದ್ದು, ಮಕ್ಕಳನ್ನು ನೋಡಿಕೊಳ್ಳಬೇಕಿದ್ದ ಸಹಾಯಕಿಯೊಬ್ಬಳು 10 ತಿಂಗಳ ಹೆಣ್ಣು ಮಗುವೊಂದನ್ನು ಮಾತು ಕೇಳದ ಕಾರಣಕ್ಕೆ ಎತ್ತಿ ಎಸೆಯುವುದರೊಂದಿಗೆ ಮನ ಬಂದಂತೆ ಥಳಿಸಿದ್ದಾಳೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಿಸಿಟಿವಿ ದೃಶ್ಯವನ್ನು ನೋಡಿದ ಮಗುವಿನ ಪೋಷಕರು ಈ ಕುರಿತು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು, ಡೇ ಕೇರ್ ಮಾಲೀಕರು ಮತ್ತು ಸಹಾಯಕಿ ಯನ್ನು ಬಂಧಿಸಲಾಗಿದೆ ಎನ್ನಲಾಗಿದ್ದು, 

ಎಂದಿನಂತೆ ತಮ್ಮ ಮಗುವನ್ನು ಪೋಷಕರು ಡೇ ಕೇರ್ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ. ಹಾಗೇಯೆ ಸಂಜೆ ಕೆಲಸ ಮುಗಿಸಿಕೊಂಡು ಬರುವ ಸಮಯದಲ್ಲಿ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ಈ ಸಂದರ್ಭದಲ್ಲಿ ಮಗುವಿನ ಮೈ ಮೇಲೆ ಗಾಯದ ಗುರುತುಗಳಾಗಿದ್ದರಿಂದ ಪೋಷಕರು ಡೇ ಕೇರ್ ಸಿಸಿಟಿವಿ ತೆಗೆದು ನೋಡಿದ ಸಂದರ್ಭದಲ್ಲಿ ಈ ಕೃತ್ಯ ಬಯಲಾಗಿದೆ.